ಬೆಳ್ತಂಗಡಿ, ಕೊಕ್ಕಡ | ಮನೆಯ ಪಂಪ್ ಆನ್ ಮಾಡಲು ಹೋದಾಗ ತಾಯಿ ಮಗು ವಿದ್ಯುತ್ ಶಾಕ್ ಗೆ ಬಲಿ
ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮಗು ದಾರುಣವಾಗಿ ಮೃತಪಟ್ಟ ದುರ್ಘಟನೆ ಇಂದು ಮೇ.30ರಂದು ಬೆಳಿಗ್ಗೆ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಕೊಕ್ಕಡದ ಪಟ್ರಮೆ ಎಂಬಲ್ಲಿ ಈ ಅನಾಹುತ ನಡೆಸಿದ್ದು,
ಪಟ್ರಮೆ ಕೋಡಂದೂರು ನಿವಾಸಿ ಹರೀಶ್ ಎಂಬವರ ಪತ್ನಿ ಗೀತಾ (30 ) ಹಾಗೂ ಅವರ ನಾಲ್ಕೂವರೆ ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.
ಇಂದು ಬೆಳಿಗ್ಗೆ 10 ಗಂಟೆ ವೇಳೆಗೆ ಗೀತಾರವರು ಮಗು ಭವಿಶ್ ನನ್ನು ಹಿಡಿದುಕೊಂಡು ಪಂಪ್ ಸ್ವಿಚ್ ಆನ್ ಮಾಡಲು ಹೋಗಿದ್ದ ವೇಳೆ ವಿದ್ಯುತ್ ಅಘಾತಕ್ಕೆ ಒಳಗಾಗಿ ತಾಯಿ ಹಾಗೂ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತ ಗೀತಾರ ಪತಿ ಹರೀಶ್ ಗೌಡ ಅವರು ಇತ್ತೀಚೆಗಷ್ಟೇ ಅಲ್ಲಿ ಆಸ್ತಿ ಕೊಂಡಿದ್ದರು. ಜಾಗದ ನೀರಿನ ಪಂಪ್ ಆನ್ ಮಾಡಲು ಮೃತ ಗೀತಾ ಅವರ ಜತೆ ಆಕೆಯ ಅತ್ತೆ ಕೂಡಾ ಸ್ಥಳಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಆಕೆ ಮಗುವನ್ನು ಎತ್ತಿಕೊಂಡು ಕರೆಂಟ್ ಆನ್ ಮಾಡಲು ಹೋದಾಗ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.