ಬೆಳ್ತಂಗಡಿ, ನೆರಿಯದ ಸಿಯೊನ್ ಆಶ್ರಮ | ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ 200 ಅಧಿಕ ಸೋಂಕಿತರನ್ನು 10 ಕ್ಕೂ ಅಧಿಕ ಅಂಬುಲೆನ್ಸ್ ಮುಖಾಂತರ ಧರ್ಮಸ್ಥಳಕ್ಕೆ ಸ್ಥಳಾಂತರ

ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲಿನ ಸಿಯೋನ್ ಆಶ್ರಮ ಕೊರೊನಾ ಹೊಡೆತ ಸಂಕಷ್ಟಕ್ಕೆ ಸಿಲುಕಿದ್ದ ಎಲ್ಲಾ ಸೋಂಕಿತರನ್ನು ಇದೀಗ ಬೇರೆ ಕಡೆಗೆ ಶಿಫ್ಟ್ ಮಾಡಲಾಗುತ್ತಿದೆ.

ಸಿಯೋನ್ ಆಶ್ರಮದಲ್ಲಿ ಒಟ್ಟು 270 ಆಶ್ರಮವಾಸಿಗಳಿದ್ದು, ಅವರಲ್ಲಿ ಒಟ್ಟು 135 ಜನ ಪಾಸಿಟಿವ್ ಎಂದು ಹೇಳಲಾಗಿತ್ತು. ಆದರೆ ಇದೀಗ ಒಟ್ಟು 201 ಕ್ಕಿಂತಲೂ ಅಧಿಕ ಜನರು ಪಾಸಿಟಿವ್ ಆಗಿದ್ದು ಆತಂಕ ಮೂಡಿಸಿದೆ.

ಆ ಎಲ್ಲಾ ಪಾಸಿಟಿವ್ ವ್ಯಕ್ತಿಗಳನ್ನು ಇದೀಗ ಧರ್ಮಸ್ಥಳದ ರಜತಾದ್ರಿ ವಸತಿ ಗ್ರಹಕ್ಕೆ ಕಳುಹಿಸಿಕೊಡಲಾಗುತ್ತಿದೆ. ಅಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಕ್ವರಂಟೈನ್ ಮಾಡಲಾಗುವುದು.

ಅದಕ್ಕಾಗಿ ಇದೀಗ ಸುಮಾರು 10 ಅಂಬುಲೆನ್ಸ್ ಗಳನ್ನು ಒದಗಿಸಲಾಗಿದ್ದು, ಇದೀಗ ಅಂಬುಲೆನ್ಸ್ ಗಳು ಒಂದೊಂದಾಗಿ ಆಶ್ರಮದಿಂದ ಧರ್ಮಸ್ಥಳದತ್ತ ಸೋಂಕಿತ ವ್ಯಕ್ತಿಗಳನ್ನ ಹೊತ್ತು ಸಾಗುತ್ತಿವೆ.

ಇವತ್ತು ಮುಂಜಾನೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಸಿಯೋನಾಶ್ರಮಕ್ಕೆ ಭೇಟಿ ನೀಡಿ ಸುರಕ್ಷಿತವಾಗಿ ವಸತಿಗೃಹಕ್ಕೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಕಲಾಮದು ಅವರು ಈ ಸಂದರ್ಭದಲ್ಲಿ ಅಲ್ಲಿದ್ದಾರೆ.

ಮಾನಸಿಕ ರೋಗಿಗಳಿಗೆ ಹಾಗೂ ನಿರ್ಗತಿಕರಿಗಾಗಿ ಹಲವಾರು ವರ್ಷಗಳಿಂದ ಸಿಯೋನ್ ಆಶ್ರಮ ಕಾರ್ಯನಿರ್ವಹಿಸುತ್ತಿದ್ದು ಅಲ್ಲಿ ಒಟ್ಟು 270 ಆಶ್ರಮ ವಾಸಿಗಳಿದ್ದಾರೆ. ಹತ್ತಾರು ಮಂದಿ ಸಿಬ್ಬಂದಿಗಳು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Leave A Reply

Your email address will not be published.