ಕೋವಿಡ್ನಿಂದ ಅನಾಥರಾದ ಮಕ್ಕಳಿಗೆ ನೆರವು ಘೋಷಿಸಿದ ಪ್ರಧಾನಿ | ಪಿಎಂ ಕೇರ್ಸ್ನಿಂದ 10 ಲಕ್ಷ ನೆರವು
ಕೋವಿಡ್ 19 ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ ಎಲ್ಲಾ ಮಕ್ಕಳಿಗೆ “PM-CARES ಯೋಜನೆಯಡಿ ನೆರವು ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಘೋಷಣೆ ಮಾಡಿದ್ದಾರೆ.
ಕೋವಿಡ್ನಿಂದ ತಂದೆ ತಾಯಿ,ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗೆ 18 ವರ್ಷ ತುಂಬುತ್ತಲೇ ಪ್ರತಿ ತಿಂಗಳು ಪಿಂಚಣಿ ನೆರವು ನೀಡಲಾಗುವುದು. 23 ವರ್ಷ ತುಂಬಿದ ಮೇಲೆ ಪಿಎಂ ಕೇರ್ಸ್ ನಿಂದ 10 ಲಕ್ಷ ರೂಪಾಯಿ ನಗದು ಹಣ ನೀಡಲಾಗುವುದು ಎಂದು ಪ್ರಧಾನಮಂತ್ರಿ ಕಚೇರಿ ಬಿಡುಗಡೆಗೊಳಿಸಿರುವ ಅಧಿಕೃತ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಪ್ರಧಾನಿ ಏನೆಲ್ಲ ಘೋಷಿಸಿದರು
*ಅನಾಥ ಮಕ್ಕಳಿಗೆ 18 ವರ್ಷ ತುಂಬಿದ ನಂತರ ಪ್ರತಿ ತಿಂಗಳು ಸ್ಟೈಫಂಡ್ ಪಡೆಯಲಿದ್ದಾರೆ. 23 ವರ್ಷವಾದ ಬಳಿಕ 10 ಲಕ್ಷ ರೂಪಾಯಿ ನಗದು ದೊರಕಲಿದೆ.
*ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಲದ ವ್ಯವಸ್ಥೆ ಮಾಡಲಾಗುವುದು, ಆದರೆ ಬಡ್ಡಿಯನ್ನು ಕೇಂದ್ರ ಸರ್ಕಾರ ಪಾವತಿ ಮಾಡಲಿದೆ.
*ಕೋವಿಡ್ ನಿಂದ ಅನಾಥವಾದ ಮಕ್ಕಳು 18 ವರ್ಷದವರಾಗುವವರೆಗೆ 5 ಲಕ್ಷ ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುವುದು, ಅದರ ಪ್ರೀಮಿಯಮ್ ಮೊತ್ತ ಪಿಎಂ ಕೇರ್ಸ್ ನಿಂದ ಪಾವತಿ ಮಾಡಲಾಗುವುದು.