ನನ್ನದು ನಿನ್ನ ಬಾಲ್ ಗಳಿಗಿಂತ ಖಂಡಿತವಾಗಿಯೂ ದೊಡ್ಡದು | ಸ್ತನಗಳ ಸೈಜ್ ಬಗ್ಗೆ ಅಭಿಮಾನಿ ಪ್ರಶ್ನೆಗೆ ಈ ನಟಿ ಖಡಕ್ ಆಗಿ ಹೇಳಿದ್ದಳು !

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳೊಂದಿಗೆ ಲೈವ್ ಚಾಟಿಂಗ್ ನಡೆಸುವುದು ನಟಿಯರಿಗೆ ಇವತ್ತು ಪ್ಯಾಶನ್ ಆಗಿಬಿಟ್ಟಿದೆ. ಅವರವರ ಫ್ಯಾನ್ಸ್ ಆ ಕ್ಷಣದ ಅವರ ಮನಸ್ಸಿನ ಪ್ರತಿರೂಪ ದಂತಹ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಕೊಳ್ಳುತ್ತಾರೆ. ಇವರಲ್ಲಿನ ಕೆಲ ಕಿಡಿಗೇಡಿಗಳು ಅಶ್ಲೀಲವಾಗಿ, ತೀರಾ ಪರ್ಸನಲ್ ಆಗಿ ಪ್ರಶ್ನೆ ಕೇಳುವುದು, ಮಾತನಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ.

 

ಇತ್ತೀಚೆಗೆ ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟಿ ಯಶಿಕಾ ಆನಂದ್ ಸಹ ತಮ್ಮ ಫ್ಯಾನ್ಸ್ ಜೊತೆ ಸಂವಾದಕ್ಕೆ ಇಳಿದಿದ್ದಳು. ‘ ಆಸ್ಕ್ ಮೀ ಎನಿಥಿಂಗ್ ‘ ಎಂಬ ಥೀಮ್ ಅಡಿಯಲ್ಲಿ ಸಂವಾದಕ್ಕೆ ಕೂತಾಗ ಆಕೆ ಇಂಥದ್ದೇ ಕಹಿ ಅನುಭವವನ್ನು ಎದುರಿಸಿದ್ದಾಳೆ.

ಯಶಿಕಾ ತೆಲುಗಿನಲ್ಲಿ ಮೊದಲು ಪ್ರತ್ಯಕ್ಷ ಆದ ನಟಿ. ಅಲ್ಲಿ ಕೇವಲ ಒಂದೇ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ದೇವರಕೊಂಡ ಅಭಿನಯದ ನೋಟಾ ಚಿತ್ರದಲ್ಲಿ ಆಕೆ ತೆರೆಹಂಚಿಕೊಂಡಿದ್ದರು. ಆದರೆ, ಸಿನಿಮಾ ಸೋತಿದ್ದರಿಂದ ಟಾಲಿವುಡ್‌ನಿಂದ ಯಶಿಕಾಗೆ ಹೆಚ್ಚಿನ ಸಿನಿಮಾ ಆಫರ್‌ಗಳು ಬರಲಿಲ್ಲ.

ಆನಂತರ ತಮಿಳಿನಲ್ಲಿ ಹಲವು ಚಿತ್ರಗಳಿಗೆ ಸಹಿ ಮಾಡಿರುವ ಯಶಿಕಾ ಸಿಕ್ಕಾಪಟ್ಟೆ ಬಿಜಿಯಾಗಿದ್ದಾರೆ. ಆದರೆ, ಕೋರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶೂಟಿಂಗ್ ಸ್ತಬ್ಧವಾಗಿದೆ. ಈ ಮಧ್ಯೆ ಬಿಡುವಿನಲ್ಲಿ ಗುರುವಾರ ಅಭಿಮಾನಿಗಳೊಂದಿಗೆ ಯಶಿಕಾ ಇನ್‌ಸ್ಟಾಗ್ರಾಂ ನಲ್ಲಿ ಸಂವಹನ ನಡೆಸಿದಳು.

ಈ ವೇಳೆ ಅಭಿಮಾನಿ ಪೋಲಿಯೊಬ್ಬ ಯಶಿಕಾರ ಸ್ತನಗಳ ಗಾತ್ರದ ಬಗ್ಗೆ ಪಶ್ನಿಸಿದ. ” ನಿಮ್ಮ ಬೂಬ್ ಸೈಜ್ ಎಷ್ಟು ? ಎಂದಾತ ಪ್ರಶ್ನೆ ಕೇಳಿದ್ದ. ಇದಕ್ಕೆ ಬೊಂಬಾಟ್ ಉತ್ತರ ನೀಡಿರುವ ಯಶಿಕಾ “ನಿಮ್ಮ ಚೆಂಡುಗಳಿಗಿಂತ ದೊಡ್ಡದಾಗಿವೆ’ ಎಂದು ನೇರವಾಗಿಯೇ ತಿರುಗೇಟು ನೀಡಿದ್ದಾಳೆ.

ಈ ರೀತಿ ಕಿರಿಕಿರಿ ಉಂಟು ಮಾಡುವ ಪ್ರಶ್ನೆಗಳು ಅಭಿಮಾನಿಗಳೊಂದಿಗೆ ಸಂವಹನ ನಡೆಸುವಾಗಲೆಲ್ಲಾ ನಟಿಯರಿಗೆ ಎದುರಾಗುವುದು ಸಾಮಾನ್ಯವಾಗಿದೆ. ಕೆಲವು ನಟಿಯರು ಇಂತಹ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಮುನ್ನಡೆಯುತ್ತಾರೆ. ಆದರೆ, ಇನ್ನು ಕೆಲವರು ಇದನ್ನು ಸಾರ್ವಜನಿಕರ ಗಮನಕ್ಕೆ ತಂದು ನಮ್ಮ ನಡುವೆ ಇಂತವರು ಇದ್ದಾರೆಂದು ತಿಳಿಸುತ್ತಾರೆ.

ಇದೀಗ ಯಶಿಕಾ ನೀಡಿದ ಖಡಕ್ ಉತ್ತರಕ್ಕೆ ಅವರ ಅಭಿಮಾನಿಗಳು ಮತ್ತು ಸಾಮಾಜಿಕ ಜಾಲತಾಣ ಫಾಲೋವರ್ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.

Leave A Reply

Your email address will not be published.