ಈ ರೈತ ಎಷ್ಟು ಅದೃಷ್ಟವಂತನಪ್ಪಾ!!?! ಹೊಲದಲ್ಲಿ ದೊರೆಯಿತು ವಜ್ರ
ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ಕಂಡು ನಮಗೆ ಇಂತಹ ದಿನ ಯಾವಾಗ ಬರುತ್ತದೋ ಎಂದು ಯೋಚಿಸುತ್ತೇವೆ. ಆದರೆ, ಇದೆಲ್ಲ ಬರೀ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ರೈತನೊಬ್ಬನ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಇವನೆಂಥ ಅದೃಷ್ಟವಂತನಪ್ಪಾ ಎಂದು ಆಶ್ಚರ್ಯ ಪಡುತ್ತೀರಿ.
ಹೌದು. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಜೊನ್ನಾಗಿರಿ ವಲಯದಲ್ಲಿರುವ ಗ್ರಾಮವೊಂದರ ರೈತನೊಬ್ಬ ಎಂಥಾ ಅದೃಷ್ಟವಂತನೆಂದರೆ ಒಂದೇ ದಿನದಲ್ಲಿ ಲಕ್ಷಾಧಿಪತಿ ಆಗಿದ್ದು, ಇಡೀ ಗ್ರಾಮಸ್ಥರು ನಿಬ್ಬೆರಗಾಗುವಂತೆ ಮಾಡಿದ್ದಾನೆ.
ರೈತ ತನ್ನ ಜಮೀನಿನಲ್ಲಿ ಕೆಲಸ ಮಾಡುವಾಗ ಸಣ್ಣದಾದ ಹೊಳೆಯುವ ವಸ್ತುವೊಂದು ಕಾಣಸಿಗುತ್ತದೆ. ತುಂಬಾ ಆಕರ್ಷಕವಾಗಿದ್ದರಿಂದ ವಜ್ರ ಅಂದುಕೊಂಡು ಸಂತೋಷದಿಂದ ಮನೆಗೆ ತರುತ್ತಾನೆ. ಹಾಗೆಯೇ ಅದನ್ನು ಸ್ಥಳೀಯ ಡೈಮಂಡ್ ಡೀಲರ್ ಬಳಿ ತೆಗೆದುಕೊಂಡು ಹೋಗುತ್ತಾನೆ. ಅದು ಕೇವಲ ಹರಳಲ್ಲ, ನಿಜವಾಗಿಯೂ ಅದು ಅತ್ಯಮೂಲ್ಯವಾದ ವಜ್ರ ಎಂದು ಹೇಳಿದಾಗ ರೈತನಿಗೆ ಫುಲ್ ಶಾಕ್ ಆಗುತ್ತದೆ.
ಆ ವಜ್ರವನ್ನು ರಹಸ್ಯವಾಗಿಯೇ ಹರಾಜು ಹಾಕಲಾಗುತ್ತದೆ. ಡೈಮಂಡ್ ವ್ಯಾಪಾರಿಯೊಬ್ಬ ಸುಮಾರು 25 ಲಕ್ಷ ರೂಪಾಯಿ ಕೊಟ್ಟು ಅದನ್ನು ಖರೀದಿಸಿದ್ದಾನೆಂದು ತಿಳಿದುಬಂದಿದೆ. 30 ಕ್ಯಾರೆಟ್ ತೂಕದ ಡೈಮಂಡ್ನ ಮಾರುಕಟ್ಟೆಯ ಬೆಲೆ 3 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ರೈತನ ಜಮೀನಿನಲ್ಲಿ ಬೆಲೆಬಾಳುವ ಡೈಮಂಡ್ ಪತ್ತೆಯಾಗಿದೆ ಎಂಬ ಸುದ್ದಿ ಇದೀಗ ಜೊನ್ನಗಿರಿ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ಕಡಿಮೆ ಬೆಲೆಗೆ ಡೈಮಂಡ್ ಖರೀದಿಸಿದ ವ್ಯಾಪಾರಿಯು ಸಹ ಅದೃಷ್ಟವಂತನಾಗಿದ್ದು, ಗಾತ್ರದಲ್ಲಿ ಡೈಮಂಡ್ ಚಿಕ್ಕದಾಗಿದ್ದರೂ ಅದರ ಮೌಲ್ಯ ಮಾತ್ರ ಎಲ್ಲರಿಗೂ ಶಾಕ್ ತಂದಿದೆ.
ಇದೆಲ್ಲವು ಅನಧಿಕೃತವಾಗಿಯೇ ನಡೆದಿದೆ. ಪ್ರತಿವರ್ಷ ನೂರಾರು ವಜ್ರಗಳು ಸ್ಥಳೀಯರ ಭೂಮಿಗಳಲ್ಲಿ ಪತ್ತೆಯಾಗುತ್ತವೆ. ಅವುಗಳನ್ನು ಡೈಮಂಡ್ ವ್ಯಾಪಾರಿಗಳು ರಹಸ್ಯವಾಗಿಯೇ ಖರೀದಿಸಿ ಹಣ ಗಳಿಸುತ್ತಿದ್ದಾರೆ. ಆದರೆ, ಇದರಿಂದ ಸಾರ್ವಜನಿಕ ಅಥವಾ ಸರ್ಕಾರ ಖಜಾನೆಗೆ ಏನು ಸಿಗುತ್ತಿಲ್ಲ.
ಈ ವಜ್ರ ದೊರಕಿದ ಕಾರಣ ರೈತ ಸ್ವಲ್ಪ ಅದೃಷ್ಟವಂತನಾದರೆ , ಡೈಮಂಡ್ ವ್ಯಾಪಾರಿ ಇನ್ನೂ ಅದೃಷ್ಟ ವಂತನಾಗಿ ಹೊರಹೊಮ್ಮಿದ್ದಾನೆ.