ಕರಾವಳಿಯ ಈ ಜಿಲ್ಲೆಯಲ್ಲಿ ಇನ್ಮುಂದೆ ಕೋವಿಡ್ ಸೋಂಕಿತರ ಕೈಗೆ ಸೀಲ್

ಕೊರೋನಾ ವೈರಸ್ ಸೋಂಕಿನ ನಿಯಂತ್ರಣದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ಇದೀಗ ಮುಂದಾಗಿದೆ. ಈಗಾಗಲೇ ಜಿಲ್ಲಾಡಳಿತವು ಕೊರೊನಾ ಸೋಂಕಿತರ ಮನೆಗಳನ್ನು ಸೀಲ್ ಡೌನ್ ಮಾಡುವುದಕ್ಕೇ ನಿರ್ಧರಿಸಿತ್ತು. ಈಗ ಸೀಲ್ ಡೌನ್ ನ ಜೊತೆಗೆ ಜೊತೆಗೆ ಇನ್ಮುಂದೆ ಕೊರೊನಾ ಸೋಂಕಿತರ ಕೈಗಳಿಗೆ ಸೀಲ್ ಹಾಕಲು ನಿರ್ಧರಿಸಿದೆ.

ಸೋಂಕಿಗೆ ಒಳಗಾಗಿ ಮನೆಗಳಲ್ಲಿ ಐಸೋಲೇಟ್ ಆಗಿರುವವರು ಮನೆಯಿಂದ ಹೊರಗೆ ತಿರುಗಾಡುತ್ತಿದ್ದಾರೆ. ಇದರಿಂದಾಗಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಜೊತೆಗೆ ಸರಕಾರ ಜಾರಿಗೆ ತಂದ ಹೊಸ ನಿಯಮದಿಂದಾಗಿ ಸೋಂಕಿಗೆ ತುತ್ತಾದವರು ಯಾರೂ ಅನ್ನೋ ಬಗ್ಗೆ ಇತರರಿಗೆ ಮಾಹಿತಿ ಸಿಗೋದೇ ಇಲ್ಲ. ಹೀಗಾಗಿ ಜಿಲ್ಲಾಡಳಿತ ಕೊರೋನಾ ಸೋಂಕಿಗೆ ಒಳಗಾದವರನ್ನು ಗುರುತಿಸಲು ಕೈಗೆ ಸೀಲ್ ಹಾಕುವ ತಂತ್ರಕ್ಕೆ ಮೊರೆ ಹೋಗಿದೆ. ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ಕೊರೊನಾ ಸೋಂಕಿತರ ಮನೆಗಳ ಮುಂಭಾಗದಲ್ಲಿ ಪಟ್ಟಿಯನ್ನು ಅಳವಡಿಸಿ, ಮನೆಯನ್ನು ಸೀಲ್ ಡೌನ್ ಮಾಡುತ್ತಿರುವ ಕೆಲಸ ಕಳೆದೆರಡು ದಿನಗಳಿಂದ ನಡೆಯುತ್ತಿದೆ. ಇದೀಗ ಕೊರೋನಾ ಪಾಸಿಟಿವ್ ಬಂದವರ ಕೈಗಳಿಗೆ ಸೀಲ್ ಮಾಡುವ ಮೂಲಕ ಅವರನ್ನು ಸುಲಭವಾಗಿ ಗುರುತಿಸುವುದು, ಆ ಮೂಲಕ ಸೋಂಕಿತರ ಮೂವ್ಮೆಂಟ್ ಅನ್ನು ಕಡಿಮೆ ಮಾಡುವುದು ಉಡುಪಿ ಜಿಲ್ಲಾಡಳಿತದ ಉದ್ದೇಶ.

ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂಗೆ ಆಯಿತು ಸರಕಾರದ ನಿರ್ಧಾರ. ಕಳೆದ ಸಲ ತೆಗೆದುಕೊಂಡ ಇಂತಹ ಉತ್ತಮ ನಿರ್ಧಾರಗಳನ್ನು ಈ ಬಾರಿ ಯಾಕೆ ಯಾವ ಕಾರಣಕ್ಕೆ ತೆಗೆದುಕೊಳ್ಳಲು ಇಷ್ಟು ಮೀನಮೇಷ ಎಣಿಸುತ್ತಿದೆ ಎನ್ನುವುದಕ್ಕೆ ಯಾರಲ್ಲಿಯೂ ಉತ್ತರವಿಲ್ಲ. ಇವತ್ತಿಗೂ ದಕ್ಷಿಣ ಕನ್ನಡ ಸೇರಿದಂತೆ ಬೇರೆ ಯಾವ ಜಿಲ್ಲೆಗಳಲ್ಲೂ ಹ್ಯಾಂಡ್ ಸೀಲಿಂಗ್ ವ್ಯವಸ್ಥೆ ಇಲ್ಲ.

Leave A Reply

Your email address will not be published.