ತಾನು ಮೃತಪಟ್ಟರೆ ಎಷ್ಟು ಜನ ಸೇರುತ್ತಾರೆ ಎಂದು ಪರೀಕ್ಷಿಸಲು ಸತ್ತಂತೆ ನಟಿಸಿದ ಮಹಿಳೆ !

ಇಂಥದ್ದೊಂದು ವಿಚಿತ್ರ ಆಲೋಚನೆ ನಿಮಗೂ ಬಂದಿದ್ದಿರಬಹುದು. ನಾವು ಸತ್ತು ಹೋದ ತಕ್ಷಣ ನಮ್ಮ ಸುತ್ತ ಮುತ್ತ ಏನೇನೆಲ್ಲಾ ನಡೆಯುತ್ತದೆ. ಯಾರೆಲ್ಲ ನಮ್ಮ ಗೆಳೆಯರು ಮತ್ತು ಆಪ್ತರು ನಮ್ಮನ್ನು ನೋಡಲು ಬರುತ್ತಾರೆ. ಮುಖ್ಯವಾಗಿ ಯಾರು ಬರೋದಿಲ್ಲ ?! ಎಂಬ ಕುತೂಹಲ ನಿಮಗೂ ಬಂದಿದ್ದಿರಬಹುದು. ಇಂತಹಾ ಯೋಚನೆ ಬಂದ ನಾವು ಅದನ್ನು ಅಲ್ಲಿಗೇ ಬಿಟ್ಟು ಸುಮ್ಮನಿರುತ್ತೇವೆ.

ಆದರೆ ಆಕೆ ಹಾಗೆ ಸುಮ್ಮನೆ ಬಿಟ್ಟಿಲ್ಲ. ಆಕೆಗೆ ತನ್ನ ಅಂತಿಮ ಯಾತ್ರೆಯಲ್ಲಿ ಎಷ್ಟು ಜನ ಸೇರುತ್ತಾರೆ ಎನ್ನುವುದರ ಮೂಲಕ, ತಾನು ಎಷ್ಟು ಜನರ ಪ್ರೀತಿ ಗಳಿಸಿದ್ದೇನೆ ಎನ್ನುವುದನ್ನು ನೋಡಬೇಕು ಎಂದುಕೊಂಡಿದ್ದಾಳೆ. ಈ ಮಹಿಳೆಯ ತಲೆಗೆ ಬಂದಿದ್ದೆ ತಡ, ಹಾಗಾಗಿ ಈ ವಿಚಿತ್ರ ಕೆಲಸಕ್ಕೆ ಮಹಿಳೆ ಕೈ ಹಾಕಿಬಿಟ್ಟಿದ್ದಾಳೆ.   

ಈ ಘಟನೆ ನಡೆದದ್ದು ಚಿಲಿಯಲ್ಲಿ. ಮಯಾರಾ ಅಲೋಂಜಾ ಎಂಬ ಮಹಿಳೆ, ತನ್ನ ಸಾವಿನ ಸುದ್ದಿಯನ್ನು ತನ್ನ ಎಲ್ಲಾ ಬಂಧುಗಳಿಗೆ ತಲುಪಿಸಲು ವ್ಯವಸ್ಥೆ ಮಾಡುತ್ಸುದ್ದಿ ತಿಳಿಯುತ್ತಿದ್ದಂತೆ ಎಲ್ಲರೂ ಅಲೋಂಜಾ ನಿವಾಸಕ್ಕೆ ಧಾವಿಸಿ ಬಿಟ್ಟಿದ್ದಾರೆ. 

ಮಹಿಳೆಯ ಈ ಸಾವಿನ ನಾಟಕ ಸುಮಾರು 4 ಗಂಟೆಗಳವರೆಗೆ ನಡೆದಿದೆ. ಮಹಿಳೆ ಅಷ್ಟು ಹೊತ್ತು ಶವ ಪೆಟ್ಟಿಗೆಯಲ್ಲಿ ಸತ್ತಂತೆ ಮಲಗಿಬಿಟ್ಟಿ, ಸತ್ತಂತೆ ನಟಿಸಿಯೇ ಅಲ್ಲಿ ನಡೆಯುವ ವಿದ್ಯಮಾನಗಳನ್ನು ಅರೆಮುಚ್ಚಿದ ಕಣ್ಣುಗಳಲ್ಲಿ ಗಮನಿಸಿದ್ದಾಳೆ. ತನ್ನ ಇಚ್ಛೆಯಂತೆ ಬಹಳಷ್ಟು ಜನ ಸೇರಿದ್ದಾರೆ ಎಂದು ಖಾತ್ರಿಯಾಗುತ್ತಿದ್ದಂತೆ, ಶವ ಪೆಟ್ಟಿಗೆಯಿಂದ ಎದ್ದು ಬಂದಿದ್ದಾಳೆ.

ಈ ಕೊರೋನಾ ಕಾಲದಲ್ಲಿ ಮೃತದೇಹಕ್ಕೆ ಹೆಗಲು ಕೊಡಲು 4 ಜನ ಸಿಗಲ್ಲ. ಹಾಗಾಗಿ ತಾನು ಸತ್ತರೆ ಯಾರೆಲ್ಲಾ ಬರುತ್ತಾರೆ ಎನ್ನುವುದನ್ನ ನೋಡಬೇಕಿತ್ತು. ಈ ಕಾರಣಕ್ಕಾಗಿ ತಾನು ಸತ್ತಂತೆ ನಟಿಸಿರುವುದಾಗಿ ಮಹಿಳೆ ನಂತರ ಹೇಳಿಕೆ ನೀಡಿದ್ದಾಳೆ.

ಈ ನಾಟಕಕ್ಕೆ ಮಹಿಳೆ ಒಂದು ಲಕ್ಷಕ್ಕೂ ಅಧಿಕ ಹಣವನ್ನು ವ್ಯಯಿಸಿದ್ದು, ಈ ವೇಳೆ ಪ್ರೋಪೇಶನಲ್ ಫೋಟೋಗ್ರಾಫರ್ ನನ್ನು ಕೂಡಾ ಕರೆಸಲಾಗಿತ್ತು. ಆಕೆ ಎದ್ದು ಕೂತ ನಂತರ ಅಲ್ಲಿಗೆ ಬಂದಿದ್ದ ಎಲ್ಲಾ ನೆಂಟರಿಷ್ಟ ಜೊತೆ ಫೋಟೋ ಶೂಟ್ ಮಾಡಲಾಗಿದೆ. ನಂತರ ಮಹಿಳೆ ಎಲ್ಲರ ಜೊತೆ ಪಾರ್ಟಿ ಮಾಡಿ ಸಂಭ್ರಮಿಸಿದ್ದಾಳೆ.

Leave A Reply

Your email address will not be published.