ಸಿಬ್ಬಂದಿ ಜತೆಯಲ್ಲೇ ನಡು ರಸ್ತೆಯಲ್ಲಿ ಪುಂಡಿ ತಿಂದ ಕಮೀಷನರ್
ಮಂಗಳೂರು ನಗರದಲ್ಲಿ ಕೋವಿಡ್ ಬಂದೋಬಸ್ತ್ ಕಾರ್ಯದ ನಡುವೆ ಸಿಬ್ಬಂದಿ ಜತೆಯಲ್ಲೇ ನಡು ರಸ್ತೆಯಲ್ಲಿ ನಿಂತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತುಳುನಾಡಿನ ಸಾಂಪ್ರದಾಯಿಕ ತಿಂಡಿ ಪುಂಡಿ ತಿಂದರು.
ಮಂಗಳವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಬಂದೋಬಸ್ತ್ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಕ್ಲಾಕ್ ಟವರ್ ಬಳಿ ಪರಿಶೀಲನೆಗೆ ಆಗಮಿಸಿದ್ದರು.
ಆಗ ಅಲ್ಲಿದ್ದ ಪೊಲೀಸ್ ಸಿಬ್ಬಂದಿ ಕಮಿಷನರ್ ಗೆ ಪುಂಡಿ ಹಾಗೂ ಸಾಂಬಾರ್ ನೀಡಿದರೆ ತಾನು ಐಪಿಎಸ್ ಅಧಿಕಾರಿ ಎಂಬ ಯಾವುದೇ ಬಿಗುಮಾನವಿಲ್ಲದೆ ಸಿಬ್ಬಂದಿ ಜತೆ ನಡು ರಸ್ತೆಯಲ್ಲಿ ನಿಂತು ತಿಂಡಿ ತಿಂದರು.