ಸುಬ್ರಹ್ಮಣ್ಯ | ಪರವಾನಿಗೆ ಇಲ್ಲದೆ ಬಂದೂಕು ತಯಾರಿಸಿ ಮಾರಾಟ ,ಆರೋಪಿಯ ಬಂಧನ
ಕಡಬ : ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬಂದೂಕು ತಯಾರಿಸಿ ವಶದಲ್ಲಿಟ್ಟುಕೊಂಡಿದ್ದ ಘಟನೆ ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಎಂಬಲ್ಲಿ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸುಳ್ಯ ಪೊಲೀಸರು ಆರೋಪಿಯಿಂದ ಒಂದು ಬಂದೂಕು ಹಾಗೂ ಒಂದು ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ದಿವಾಕರ ಆಚಾರಿ ಸಿ. ಹೆಚ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಠಾಣೆಯಲ್ಲಿ ಅ.ಕ್ರ. ನಂಬ್ರ : 27/2021, ಕಲಂ 3,7,20,25(1), (a),29 Arms act-1959 ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.
ಆರೋಪಿ ದಿವಾಕರನು ಕೆಲವು ವ್ಯಕ್ತಿಗಳಿಗೆ ಅಕ್ರಮ ಬಂದೂಕು ತಯಾರಿಸಿ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ. ಈ ನಿಟ್ಟಿನಲ್ಲಿ ದಿವಾಕರ ಹೇಳಿಕೆ ಪ್ರಕಾರ ಇನ್ನಿಬ್ಬರು ಆರೋಪಿಗಳಾದ ಕಾರ್ತಿಕ್ ನೂಚಿಲ, ಅಶೋಕ, ಚಂದನ್ ಅವರಿಂದ ಕೋವಿಯನ್ನು ಸ್ವಾಧೀನ ಪಡಿಸಿಕೊಂಡು ಒಟ್ಟು 4 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾದ ನವೀನ್ ಚಂದ್ರ ಜೋಗಿ, ಪಿಎಸ್ಐ ಓಮನ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.