ಪತಿ ಪ್ರಧಾನಿ ಮೋದಿ ಅವಹೇಳನ ಹಿನ್ನೆಲೆ | ಲುಕ್ಕನ್ ಅಡ್ಯಾರ್ ಪತ್ನಿಯನ್ನು ಬ್ಯಾರಿ ಸಾಹಿತ್ಯ ಸದಸ್ಯತ್ವ ದಿಂದ ವಜಾ ಮಾಡಿದ ಅಕಾಡೆಮಿ
ಮಂಗಳೂರು ಸಾಮಾಜಿಕ ಜಾಲತಾಣ ಫೇಸ್ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ವ್ಯಕ್ತಿಯ ಪತ್ನಿ ತನ್ನ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯತ್ವವನ್ನು ಕಳೆದುಕೊಂಡು ಘಟನೆ ನಡೆದಿದೆ.
ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ನಫೀಸ ಮಿಪ್ರಿಯಾ ಅವರ ಪತಿ ಲುಕ್ಕಾನ್ ಅಡ್ಯಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅವಮಾನಿಸಿ ‘ಪ್ರಧಾನಿಯೂ ಕೊರೊನಾ ರೋಗಿಗಳ ತರಹ ಬೀದಿ ಬದಿಯಲ್ಲಿ ನರಕಯಾತನೆ ಅನುಭವಿಸಿ ನರಳಿ ನರಳಿ ಸಾಯುವಂತಾಗಲಿ ಎಂದು ಎಲ್ಲರೂ ಪ್ರಾರ್ಥಿಸಬೇಕು’ ಎಂದು ಫೇಸ್ಬುಕ್ನಲ್ಲಿ ಹಾಕಿದ ಕಾರಣಕ್ಕೆ ಈಗ ಆತನ ಪತ್ನಿ ಬ್ಯಾರಿ ಸಾಹಿತ್ಯ ಸದಸ್ಯತ್ವ ಕಳೆದುಕೊಳ್ಳುವಂತಾಗಿದೆ.
ಕೊರೊನಾದಿಂದ ಸತ್ತವರ ಶವದ ಪೋಟೊದ ಜೊತೆ ದೇಶದಲ್ಲಿ ಜನರು ಈ ರೀತಿ ಸಾಯಲು ಕಾರಣರಾದ ದೇಶದ ಪ್ರಧಾನಿಯೂ ಬೀದಿ ಬದಿಯಲ್ಲಿ ನರಕಯಾತನೆ ಅನುಭವಿಸಿ ಸಾಯುವಂತಾಗಲು ಎಲ್ಲ ಪ್ರಾರ್ಥಿಸಬೇಕು ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದನಾತ.
ಈ ಹಿನ್ನಲೆ ಲುಕ್ಕಾನ್ ಅಡ್ಯಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗ ಮುಖಂಡ ಫಝಲ್ ಅಸೈಗೋಳಿ ಕೊಣಾಜೆ ಠಾಣೆಗೆ ದೂರು ನೀಡಿದ್ದರು. ಈ ಘಟನೆ ನಡೆದ ಬೆನ್ನಲ್ಲೆ ಲುಲ್ಮಾನ್ ಅಡ್ಯಾರ್ ಅವರ ಪತ್ನಿ ನಫೀಸ ಮಿಪ್ರಿಯಾ ಅವರ ಸದಸ್ಯತ್ವವನ್ನು ರದ್ದು ಮಾಡಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಆದೇಶಿಸಿದ್ದಾರೆ.
” ದೇಶದ ಗೌರವಾನ್ವಿತ ಪ್ರಧಾನಿಯವರ ಬಗ್ಗೆ ಅತ್ಯಂತ ಕಠೋರವಾದ ಹಾಗೂ ಕಾನೂನಿಗೆ ವಿರುದ್ಧವಾದ ಪೋಸ್ಟ್ಗಳನ್ನು ನಿಮ್ಮ ಪತಿ ಹಾಕಿದ್ದಾರೆ. ದೇಶದ ಪ್ರಧಾನಿಯ ಸಾವನ್ನು ಬಯಸುವವರ ಹೆಂಡತಿಯು ನಮ್ಮ ಅಕಾಡೆಮಿ ಸದಸ್ಯರಾಗಿ ಸಮಿತಿಯಲ್ಲಿ ಮುಂದುವರಿಯುವುದು ಸರಿಯಲ್ಲ ಹಾಗೂ ತಮ್ಮನ್ನು ತಕ್ಷಣವೇ ಅಕಾಡೆಮಿ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ “ಎಂದು ಅಧ್ಯಕ್ಷರ ಅನುಮತಿ ಮೇರೆಗೆ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದಾರೆ. ಈ ಪತ್ರವೂ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.