ಹೆದ್ದಾರಿಯಲ್ಲಿ ಆಕ್ಸಿಜನ್ ಸಿಲಿಂಡರ್ ಸಾಗಾಟದ ಟೆಂಪೋ ಪಲ್ಟಿ; ಚಾಲಕ, ನಿರ್ವಾಹಕ ಪಾರು

ಉಡುಪಿ : ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಕಲ್ಲಾಪು ಬಳಿ ಹೆದ್ದಾರಿ ಮಧ್ಯೆಯೇ ಆಕ್ಸಿಜನ್ ಸಿಲಿಂಡರ್ ಸಾಗಾಟದ ಟೆಂಪೋ ಪಲ್ಟಿಯಾದ ಘಟನೆ ಶನಿವಾರ ನಡೆದಿದೆ.

 

ಮಂಗಳೂರು ಕಡೆಯಿಂದ ಬ್ರಹ್ಮಾವರದತ್ತ ತೆರಳುತ್ತಿದ್ದ ಟೆಂಪೋದಲ್ಲಿ ತಾಂತ್ರಿಕ ದೋಷದಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅದೃಷ್ಟವಶಾತ್ ಟೆಂಪೋ ಚಾಲಕ ಮತ್ತು ನಿರ್ವಾಹಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave A Reply

Your email address will not be published.