ಶಬರಿಮಲೆ | ಕಾಡಿನ ಹಾದಿಯ ಯಾತ್ರೆಗೆ ರಾತ್ರಿ ಅನುಮತಿ ನಿರಾಕರಣೆ | ಆನೆ ದಾಳಿ ಕಾರಣ
ಶಬರಿಮಲೆ : ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಗೆ ಕಾಡಿನ ಹಾದಿಯ ಮೂಲಕ ಸಾಗುವ ದಾರಿಯಲ್ಲಿ ಯಾತ್ರಿಕರಿಗೆ ರಾತ್ರಿ ನಿರ್ಬಂಧ ಹೇರಲಾಗಿದೆ.
ಅಳುದಾ ಬೆಟ್ಟ ಹಾಗೂ ಕರಿಮಲೆಯಲ್ಲಿ ಕಾಡಾನೆಗಳ ಗುಂಪು ಹೆಚ್ಚಿದ್ದು, ಅಯ್ಯಪ್ಪ ಭಕ್ತಾದಿಗಳ ಮೇಲೆರಗಿ ಪ್ರಾಣ ಹಾನಿ ಮಾಡಿರುವ ಹಿನ್ನೆಲೆಯಲ್ಲಿ ಕೇರಳ ಅರಣ್ಯ ಇಲಾಖೆ ಈ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಎರಿಮೇಲಿಯಿಂದ ಕಾಲಕಟ್ಟಿ, ಅಳುದಾ ನದಿ ದಾಟಿ ಕಲ್ಲಿಡಾಕುನ್ನು,ಅಳುದಾ ಮಲೆ, ಕರಿಮಲೆ ದಾಟಿ ಪಂಪಾ ಮೂಲಕ ಶಬರಿಮಲೆಗೆ ಹೋಗುವ ಭಕ್ತಾದಿಗಳ ಸಂಖ್ಯೆ ಹೆಚ್ಚಿದ್ದು, ಅಯ್ಯಪ್ಪ ನಡೆದುಕೊಂಡ ಹಾದಿಯಲ್ಲಿ ದೈವಿಕ ಅನುಭವ ಪಡೆಯಲು ಈ ದಾರಿಯಲ್ಲಿ ಭಕ್ತಾದಿಗಳು ಸಾಗುತ್ತಾರೆ.
ಡಿ.29 ರಂದು ಈ ಕಾಡಿನ ಹಾದಿಯು ತೆರೆದುಕೊಂಡಿದ್ದು ಜ.15ರ ತನಕವೂ ಈ ಹಾದಿಯಲ್ಲಿ ಭಕ್ತರು ಬರುತ್ತಿದ್ದಾರೆ.
ಅಲ್ಲಲ್ಲಿ ‘ ಎಚ್ಚರಿಕೆ ‘ ಫಲಕ
ಕಾಡಾನೆ ದಾಳಿಯ ಹಿನ್ನೆಲೆಯಲ್ಲಿ ಕೇರಳ ಅರಣ್ಯ ಇಲಾಖೆಯಿಂದ ಅಲ್ಲಲ್ಲಿ ಮಾಹಿತಿ ನೀಡುತ್ತಿದ್ದಾರೆ ಅಲ್ಲದೆ ಸೂಚನಾ ಫಲಕವನ್ನೂ ಅಳವಡಿಸಲಾಗಿದೆ.