ಮಚ್ಚಿನ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಹರ್ಷಲತಾ ಮತ್ತಿತರರಿಗೆ ಕರ್ತವ್ಯಕ್ಕೆ ಅಡ್ಡಿ, ಅವಾಚ್ಯ ನಿಂದನೆ | ದೂರು ದಾಖಲು

ಪುಂಜಾಲಕಟ್ಟೆ: ದಿನಾಂಕ 07.01.2020 ರಂದು ಸಮಯ ಸುಮಾರು 12.15 ಗಂಟೆಗೆ ಬೆಳ್ತಂಗಡಿ ತಾಲ್ಲೂಕಿನ ಮಚ್ಚಿನ ಗ್ರಾಮ ಪಂಚಾಯತ್ ನ ಅಧ್ಯಕ್ಷರಾಗಿರುವ ಶ್ರೀಮತಿ ಹರ್ಷಲತಾ ರವರು ಜಿಲ್ಲಾ ಪಂಚಾಯತ್ ವತಿಯಿಂದ NRLM ಯೋಜನೆಯ ಅಡಿಯಲ್ಲಿ ಮಾಹಿತಿ ಸಂಗ್ರಹಿಸಲು ತೆರಳಿದ್ದರು.

ಜಿಲ್ಲಾ ಪಂಚಾಯತ್ ವತಿಯಿಂದ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ಶ್ರೀಮತಿ ಜಾನಕಿ, ರೂಪ  ಮತ್ತು ಶ್ರೀಮತಿ ಪವಿತ್ರ ಎಂಬವರುಗಳೊಂದಿಗೆ ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲುಗುಡ್ಡೆ ಎಂಬಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾಗ ಆರೋಪಿಗಳಾದ 1.ಇರ್ಫಾನ್ ,ಕಲ್ಲಗುಡ್ಡೆ ಮನೆ, ಮಚ್ಚಿನ ಗ್ರಾಮ ಬೆಳ್ತಂಗಡಿ  2) ಅಬ್ದುಲ್ ರಶೀದ್ ತಂದೆ ಹಮೀದ್  3.ರಫೀಕ್ ಬಂಗೇರಕಟ್ಟೆ 4.ನಜೀರ್ ತಂದೆ ಇಬ್ರಾಹಿಂ 5.ರಜಾಕ್ ಬಿನ್ ಐಸಮ್ಮ  6.ಬದ್ರುದ್ದೀನ್ ಬಿನ್ ಐಸಮ್ಮ 7.ಜುನೈದ್ ಬಿನ್ ಹಮೀದ್ ಸಾಲುಮರ 8.ಹಮಿದ್ 9.ನವಾಜ್ ಹಾಗೂ ಇತರ ಕೆಲವು ಆರೋಪಿಗಳು ಶ್ರೀಮತಿ  ಹರ್ಷಲತಾ ಹಾಗೂ ಇತರ ನೌಕರರನ್ನು ತಡೆದು ನಿಲ್ಲಿಸಿ NRLM ಯೋಜನೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆಗೆ ಅಡ್ಡಿಪಡಿಸಿರುವುದು ಮಾತ್ರವಲ್ಲದೆ ಸಂಗ್ರಹಿಸಿದ್ದ ದತ್ತಾಂಶಗಳನ್ನು ನಾಶಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ.

ಈ ಬಗ್ಗೆ ಶ್ರೀಮತಿ  ಹರ್ಷಲತಾ ರವರು ನೀಡಿದ ದೂರಿನಂತೆ ಪುಂಜಾಲಕಟ್ಟೆ  ಪೋಲೀಸ್ ಠಾಣೆಯಲ್ಲಿ ಕಲಂ : 341. 504. 506.353 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave A Reply

Your email address will not be published.