ಯಕ್ಷಭಾರತಿ ಸಂಭ್ರಮೋತ್ಸವ: ಯಕ್ಷಗಾನ ಮತ್ತು ಸಾಧಕರ ಗೌರವಾರ್ಪಣೆ ಉಜಿರೆಯಲ್ಲಿ
ಸೇವಾಭಾರತಿ (ರಿ) ಕನ್ಯಾಡಿ ಬೆಳ್ತಂಗಡಿ ತಾಲೂಕು ಇದರ ಘಟಕ ಸಂಸ್ಥೆಯಾದ ಯಕ್ಷಭಾರತಿಯ ಐದನೆಯ ಸಂಭ್ರಮೋತ್ಸವದ ಅಂಗವಾಗಿ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಮತ್ತು ಸಾಧಕರ ಗೌರವಾರ್ಪಣೆ ದಿನಾಂಕ-04-01-2020 ರಂದು ಉಜಿರೆಯ ನಾಗರಾಜ ಕಾಂಪೌಂಡ್ ನ ವೇದಿಕೆಯಲ್ಲಿ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಜಿರೆಯ ಜನಾರ್ದನ ಸ್ವಾಮಿ ದೇವಸ್ಥಾನದ ಶರತ್ ಕೃಷ್ಣ ಪಡ್ವೆಟ್ನಾಯರು ವಹಿಸಿದ್ದರು.
ಹಿರಿಯ ತಾಳಮದ್ದಳೆ ಅರ್ಥಧಾರಿಯಾದ ಹರಿದಾಸ ಗಾಂಭೀರ ಧರ್ಮಸ್ಥಳ ಸಾಧಕರ ನ್ನು ಅಭಿನಂದಿಸಿ ಮಾತನಾಡಿದರು.
ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇವರಿಂದ ಕೊಡಮಾಡುವ “ಯಕ್ಷಸಿರಿ” ಪ್ರಶಸ್ತಿ ಪುರಸ್ಕೃತರಾದ ಕೆ.ಮೋಹನ ಬೈಪಡಿತ್ತಾಯ ಉಜಿರೆ ಹಾಗೂ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಆಯ್ಕೆಯಾದ ಲI ರವೀಂದ್ರ ಶೆಟ್ಟಿ ಉಜಿರೆ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮ ನಡೆಸಲು ಸ್ಥಳ ದಾನ ನೀಡಿದ ಜಯ ಶಂಕರ್ ದಾಸ್ ಉಪಸ್ಥಿತರಿದ್ದರು.
ಯಕ್ಷಭಾರತಿ ಯ ಅಧ್ಯಕ್ಷರಾದ ದಯಾನಂದ ಯಳ್ಚಿತ್ತಾಯರು ಸ್ವಾಗತಿಸಿದರು. ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ನಿರೂಪಿಸಿದ ಕಾರ್ಯಕ್ರಮದಲ್ಲಿ ಸದಸ್ಯರಾದ ಸಂತೋಷ್ ಕೇಳ್ಕರ್ ವಂದಿಸಿದರು. ಸೇವಾ ಭಾರತಿ ಯ ಟ್ರಸ್ಟಿಗಳಾದ ಮುರಳೀಧರ ದಾಸ್, ಕುಸುಮಾಕರ , ಯಕ್ಷಭಾರತಿಯ ಸದಸ್ಯರಾದ ಸತೀಶ್ ಶಿರ್ಲಾಲು, ಕೊಳ್ತಿಗೆ ಹರೀಶ್,ಗಂಗಾಧರ ಕಾಯರ್ತಡ್ಕ, ವಿಶ್ವನಾಥ ಗೌಡ ಸಹಕರಿಸಿದರು.
ತದನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ಪ್ರಾಯೋಜಕತ್ವದಲ್ಲಿ “ಕೃಷ್ಣ ಲೀಲೆ – ಕಂಸ ವಧೆ” ಯಕ್ಷಗಾನ ಬಯಲಾಟ ನಡೆಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ಮಹೇಶ್ ಕನ್ಯಾಡಿ, ಕಾವ್ಯಶ್ರೀ ಆಜೇರು, ಚಂಡೆ ಮದ್ದಳೆಯಲ್ಲಿ ಶಿತಿಕಂಠ ಭಟ್ ಉಜಿರೆ ಮತ್ತು ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ, ಚಕ್ರತಾಳದಲ್ಲಿ ಕಾರ್ತಿಕ್ ದಾಸ್
ಮುಮ್ಮೇಳದಲ್ಲಿ ಉಬರಡ್ಕ ಉಮೇಶ್ ಶೆಟ್ಟಿ, ದಿನೇಶ್ ಶೆಟ್ಟಿ ಕಾವಳಕಟ್ಟೆ, ಬಾಲಕೃಷ್ಣ ಮಣಿಯಾಣಿ, ಪದ್ಮನಾಭ ಮಾಸ್ಟರ್, ಬೋಳಂತೂರು ಜಗದೀಶ್, ಲೋಕೇಶ ಮುಚ್ಚೂರು, ಚಂದ್ರಶೇಖರ ಬನಾರಿ, ದಿವಾಕರ ಬಂಗಾಡಿ, ಪ್ರಭಾಕರ ಶೆಟ್ಟಿ, ಸಾಯಿಸುಮ ನಾವುಡ, ಅಮೃತ್, ಆನಂದ ಜೋಗಿ, ಮತ್ತು ವಿಶೇಷ ಅತಿಥಿಯಾಗಿ ತುಳು ಚಲನಚಿತ್ರನಟರಾದ ಅರವಿಂದ ಬೋಳಾರ ಪಾತ್ರ ನಿರ್ವಹಿಸಿದರು.
ಶ್ರೀ ಮಾತಾ ಆರ್ಟ್ಸ್ ಉಜಿರೆಯ ಮಾಲಕರಾದ ಗುರುಪ್ರಸಾದ್ ಕಾರ್ಯಕ್ರಮ ಸಂಯೋಜಿಸಿದ್ದರು.