ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಇಲ್ಲಿನ ಬ್ರಹ್ಮಕಲಶೋತ್ಸವದ ಪ್ರಚಾರ ಸಮಿತಿ ಸಭೆ

ಪುತ್ತೂರು : ಮುಂಬರುವ ಎಪ್ರಿಲ್ 21 ನೇ ತಾರೀಖಿನಿಂದ 26 ನೇ ತಾರೀಖಿನವರೆಗೆ ನಡೆಯುವ ಶ್ರೀ ಮಹಿಷಮರ್ದಿನಿ ದೇವಸ್ಥಾನ ಮಠಂತಬೆಟ್ಟು, ಕೋಡಿಂಬಾಡಿ ಇಲ್ಲಿನ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರಚಾರ ಸಮಿತಿಯ ಸಭೆಯು ಶ್ರೀ ದೇವಳದಲ್ಲಿ ನಡೆಯಿತು.

ಬ್ರಹ್ಮಕಲಶೋತ್ಸವದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ದೇವಾಲಯವೊಂದರಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸುವ ಮೂಲಕ ಪ್ರಚಾರ ಸಮಿತಿಯ ಪ್ರಚಾರ ಕಾರ್ಯಗಳಿಗೆ ಆಧುನಿಕ ಸ್ಪರ್ಶ ದೊರೆತಿರುವುದು ಉಲ್ಲೇಖನೀಯ.

Ad Widget

Ad Widget

Ad Widget

Ad Widget

Ad Widget

Ad Widget Ad Widget

Ad Widget

Ad Widget

Ad Widget

Ad Widget

ಸಭೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ರಾಮಕೃಷ್ಣ ಭಟ್ ರವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರಿಗೆ ವೀಡಿಯೋ ಕಾಲ್ ನೀಡುವ ಮೂಲಕ ಉದ್ಘಾಟನೆ ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಪ್ರಚಾರ ಸಮಿತಿಯ ಸಂಚಾಲಕರಾದ ಜಯಪ್ರಕಾಶ್ ಬದಿನಾರು ವಹಿಸಿದ್ದರು. ಕಾರ್ಯಕ್ರಮದ ಕುರಿತು ಮಾಹಿತಿಯನ್ನು ಅರ್ಚಕರಾದ ರಾಮಕೃಷ್ಣ ಭಟ್ ಇವರು ನೀಡಿದರು.ವೆಬ್ ಸೈಟ್ ನ ಕುರಿತು ಪ್ರಚಾರ ಸಮಿತಿಯ ಸಹಸಂಚಾಲಕರಾದ ಜಗದೀಶ್ ಕಜೆಯವರು ಮಾಹಿತಿ ನೀಡಿದರು.

ಕಾರ್ಯಕ್ರಮದ ಬಳಿಕ ಪರವೂರಿನಲ್ಲಿರುವ ಪ್ರಚಾರ ಸಮಿತಿಯ ಸದಸ್ಯರೊಡನೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಲಾಯಿತು.

ದೇವಳದ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ರೈ ಕೆದಿಕಂಡೆಗುತ್ತು ಸ್ವಾಗತಿಸಿ, ಜಗದೀಶ್ ಕಜೆ ವಂದಿಸಿದರು. ಪ್ರಚಾರ ಸಮಿತಿಯ ಸಹಸಂಚಾಲಕರಾದ ಆದರ್ಶ್ ಶೆಟ್ಟಿ ಕಜೆಕ್ಕಾರು ಮತ್ತು ಸುಭಾಷ್ ಕೃಷ್ಣ ದಡಿಕೆತ್ತಾರು ಸಹಕರಿಸಿದರು.

Leave a Reply

error: Content is protected !!
Scroll to Top
%d bloggers like this: