Mysore : ಚಾಮುಂಡೇಶ್ವರಿ ದರ್ಶನ ಮಾಡಿ ಬಂದ ಗೃಹ ಸಚಿವ ಪರಮೇಶ್ವರ್ – ‘ಅಣ್ಣ ಬಂದ.. ಅಣ್ಣ ಬಂದ.. ‘ ಎಂದು ಕೂಗಿ ವ್ಯಂಗ್ಯ

Share the Article

Mysore : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಅಮ್ಮನವರ ದರ್ಶನ ಮಾಡಿಕೊಂಡು ಹೊರ ಬರುತ್ತಿದ್ದಂತೆ ಸರತಿ ಸಾರಿನಲ್ಲಿ ನಿಂತಿದ್ದ ಭಕ್ತರು ‘ಅಣ್ಣ ಬಂದ.. ಅಣ್ಣ ಬಂದ’ ಎಂದು ವ್ಯಂಗ್ಯವಾಡಿದ ಘಟನೆ ನಡೆದಿದೆ.

ಹೌದು, ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಚಾಮುಂಡೇಶ್ವರಿಯ ದರ್ಶನ ಪಡೆಯಲು ಕರ್ನಾಟಕದ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಬಂದಿದ್ದರು. ಈ ವೇಳೆ ಅವರು ದರ್ಶನ ಮಾಡಿಕೊಂಡು ಹೊರ ಬರುತ್ತಿದ್ದಂತೆ ದೇವಸ್ಥಾನದ ಮುಂಭಾಗದಲ್ಲಿ ನಿಂತಿದ್ದ ಕೆಲವರು ‘ಅಣ್ಣ ಬಂದ.. ಅಣ್ಣ ಬಂದ..’ ಎಂದು ವ್ಯಂಗ್ಯವಾಡಿ ಜೋರಾಗಿ ತಿರುಗುತ್ತಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

View this post on Instagram

 

A post shared by Amoggha Karnataka (@amogghakarnataka)

Comments are closed.