ಬಂಟ್ವಾಳ: ದೈವದ ಕೊಡಿಯಡಿಯಲ್ಲಿ ದೈವ ಸ್ವರೂಪ ತಾಳಿ ಅಭಯ ನೀಡುತ್ತಿದ್ದ ದೈವ ಸೇವಕನಿಗೆ ಬಾಧಿಸಿದ ಕ್ಯಾನ್ಸರ್! ಬಡ ಜೀವಕ್ಕೆ ಬೇಕಿದೆ ಕರುಣಾಮಯಿಗಳ ಸಹಾಯ ಹಸ್ತ!

Share the Article

ಬಂಟ್ವಾಳ/ ಹೊಸ ಕನ್ನಡ: ದೈವದ ಕೊಡಿಯಡಿಯಲ್ಲಿ ಸಿರಿ ಸಿಂಗಾರಗೊಂಡು ದೈವ ಸ್ವರೂಪ ತಾಳಿ ತನ್ನ ಅಭಯದ ನುಡಿಯ ಮೂಲಕ ಅದೆಷ್ಟೋ ನೊಂದ ಹೃದಯಗಳಿಗೆ ಧೈರ್ಯ, ಸಾಂತ್ವನ ಹೇಳುತ್ತಾ, ನಂಬಿದ ಭಕ್ತರ ಕಷ್ಟ, ದುಃಖಗಳಿಗೆ ಪರಿಹಾರ ಸೂಚಿಸುತ್ತಾ, ದೈವದ ನೇಮ ಕಟ್ಟುವ ವೃತ್ತಿ ನಡೆಸುತ್ತಿದ್ದ ಬಂಟ್ವಾಳ ತಾಲೂಕು,ಕಾವಳ ಮೂಡುರು ಗ್ರಾಮ, ಕಾವಳ ಕಟ್ಟೆ ಅಂಚೆ, ನೆಲ್ಲಿಗುಡ್ಡೆ ನಿವಾಸಿ ಕೃಷ್ಣಪ್ಪ ನಲ್ಕೆ (45 )ಎಂಬವರು ವಿಧಿ ವಿಪರ್ಯಾಸವೋ ಎಂಬಂತೆ ಇದೀಗ ಕೆಲವು ಸಮಯಗಳಿಂದೀಚೆಗೆ ದಿಢೀರ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುತ್ತಾರೆ.

ತೀರಾ ಬಡ ಕುಟುಂಬದವರಾಗಿದ್ದು ವೃದ್ಧ ತಾಯಿ, ಪತ್ನಿ ಹಾಗೂ ಎರಡು ಚಿಕ್ಕ ಮಕ್ಕಳನ್ನು ಹೊಂದಿರುವ ಇವರ ಕಷ್ಟವನ್ನು ನೋಡಿ ಸ್ಥಳೀಯರು ಬೆಳ್ತಂಗಡಿಯ ಆಪದ್ಬಾಂಧವ ಸೇವಾದಳದ ಸಂಚಾಲಕರಾದ ರಫೀಕ್ ಸವಣಾಲು ಎಂಬವರಲ್ಲಿ ಇವರ ಕಷ್ಟಕ್ಕೆ ಸ್ಪಂದಿಸುವಂತೆ ವಿನಂತಿಸಿಕೊಂಡಿದ್ದರು.

ಇದರಂತೆ ಬೆಳ್ತಂಗಡಿಯ ಆಪದ್ಬಾಂಧವ ಸೇವಾದಳದ ಸಂಚಾಲಕರಾದ ರಫೀಕ್ ಸವಣಾಲು ಮತ್ತವರ ತಂಡ ಕಳೆದ ದಿನಾಂಕ 15.07.2025 ಮಂಗಳವಾರ ಅನಾರೋಗ್ಯಕ್ಕೆ ಒಳಗಾದ ಕೃಷ್ಣಪ್ಪ ನಲ್ಕೆಯವರ ಮನೆಗೆ ತೆರಳಿ ಅವರನ್ನು ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಕೆಲವು ಗಂಟೆಗಳ ಬಳಿಕ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ಹೆಚ್ಚಿನ ಚಿಕಿತ್ಸೆಗೆ ಇಲ್ಲಿ ಯಾವುದೇ ಸೌಲಭ್ಯಗಳು ಇಲ್ಲದಿರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸುವಂತೆ ಇಲ್ಲಿನ ವೈದ್ಯರು ತಿಳಿಸಿರುತ್ತಾರೆ.

ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸುವಷ್ಟು ಹಣಕಾಸಿನ ವ್ಯವಸ್ಥೆಗಳು ಈ ಬಡ ಕುಟುಂಬಕ್ಕೆ ಇಲ್ಲವಾಗಿದೆ. ಹೀಗಾಗಿ ನಮ್ಮ ಈ ದಯನೀಯ ಸ್ಥಿತಿಯನ್ನು ಮನಗಂಡು ಯಾರಾದರೂ ಕರುಣಾಳು ಕರುಣಾಮಯಿ ಸಹೃದಯಿಗಳು ನಮ್ಮ ಈ ಬಡ ಕುಟುಂಬದ ಮೇಲೆ ಕರುಣೆ ತೋರಿ ತೀರ ಅನಾರೋಗ್ಯಕ್ಕೆ ಒಳಗಾಗಿ ಮಲಗಿದ್ದಲ್ಲೇ ಇರುವ ಕೃಷ್ಣಪ್ಪ ನಲ್ಕೆಯವರ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಬರಿಸಲು ತಮ್ಮ ಕೈಲಾದಷ್ಟು ಸಹಾಯ ಧನ ಸಹಕಾರವನ್ನು ನೀಡಿ ಈ ಬಡಪಾಯಿಯ ಬಡಜೀವವನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದು ಸ್ವತಃ ಕೃಷ್ಣಪ್ಪ ನಲ್ಕೆ ಮತ್ತು ಅವರ ತಾಯಿ,ಪತ್ನಿ ಮತ್ತವರ ಸಣ್ಣ ಮಗ ಕೈಮುಗಿದು ವಿನಂತಿಸಿಕೊಂಡಿರುತ್ತಾರೆ.

ಕರುಣಾಳು ಸಹೃದಯೀ ಕರುಣಾಮಯಿಗಳೇ, ಕನಿಕರಿಸಿ, ಸಹಕರಿಸಿ ಬದುಕಿಸುವಿರಾ ಈ ಬಡಜೀವವಾ!?
ತಾವು ದಯಪಾಲಿಸುವ 1, 2,10 ರೂಪಾಯಿಗಳೂ, ಕರುಣಾಮಯಿ ದಾತರು ನೀಡುವ ಚಿಕಿತ್ಸಾ ವೆಚ್ಚಗಳು ಸಹಾ ಈ ಬಡ ಜೀವವನ್ನು ಉಳಿಸಲು ನೇರವಾದೀತು

ಶ್ರೀಮತಿ ಪ್ರತಿಮಾ (ಕೃಷ್ಣಪ್ಪ ನಲ್ಕೆಯವರ ಪತ್ನಿ) ಯವರ ಬೆಳ್ತಂಗಡಿ ಫೆಡರಲ್ ಬ್ಯಾಂಕ್ ಅಕೌಂಟ್ ನಂಬರ್ 19010100043601 (ಐ.ಎಫ್.ಸಿ ಕೋಡ್. FORL 0001901) ಅಥವಾ ಈ ಕೆಳಗಿನ ಗೂಗಲ್ ಪೇಗೆ ಸಹಾಯ ಹಸ್ತ ಚಾಚಿ. ಕೃಷ್ಣಪ್ಪ ನಲ್ಕೆಯವರು ಚೇತರಿಸಿಕೊಂಡು ಮತ್ತೊಮ್ಮೆ ದೈವವನ್ನು ಹೊತ್ತು ತಿರುಗಲಿ. ದೈವದ ಅಭಯ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಸದಾ ಕಾಯಲಿ.

 

Comments are closed.