Saina Nehwal Divorce: ವೈವಾಹಿಕ ಜೀವನಕ್ಕೆ ವಿದಾಯ ಹೇಳಿದ ಸೈನಾ ನೆಹ್ವಾಲ್ ದಂಪತಿ

Saina Nehwal Divorce: ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ತಮ್ಮ ಪತಿ ಪರುಪಳ್ಳಿ ಕಶ್ಯಪ್ ಅವರಿಂದ ಬೇರ್ಪಡುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಡಿವೋರ್ಸ್ ಸುದ್ದಿ ಹಂಚಿಕೊಂಡಿದ್ದಾರೆ. ಇಬ್ಬರೂ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಒಟ್ಟಿಗೆ ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಸ್ನೇಹ ಉಂಟಾಗಿ ನಂತರ ಅದು ಪ್ರೀತಿಯಾಗಿ ಪರಿವರ್ತನೆಯಾಯಿತು.

Saina Nehwal says on Instagram she is parting ways with Parupalli Kashyap. pic.twitter.com/WK1wlDCzxP
— Vinayakk (@vinayakkm) July 13, 2025
ಇದೀಗ ಸೈನಾ ನೆಹ್ವಾಲ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, “ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ಹಾದಿಗಳಲ್ಲಿ ಕರೆದೊಯ್ಯುತ್ತದೆ. ಸಾಕಷ್ಟು ಚರ್ಚೆಯ ನಂತರ, ಪರುಪಳ್ಳಿ ಕಶ್ಯಪ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ಪರಸ್ಪರ ಶಾಂತಿ, ಬೆಳವಣಿಗೆ ಮತ್ತು ಆರೋಗ್ಯಕರ ಜೀವನವನ್ನು ಆಯ್ಕೆ ಮಾಡಲು ನಿರ್ಧರಿಸಿದ್ದೇವೆ. ಈ ಸ್ಮರಣೀಯ ಕ್ಷಣಗಳಿಗೆ ನಾನು ಕೃತಜ್ಞನಾಗಿದ್ದೇನೆ ಮತ್ತು ನಿಮ್ಮೆಲ್ಲರಿಗೂ ಭವಿಷ್ಯಕ್ಕಾಗಿ ಶುಭ ಹಾರೈಸುತ್ತೇನೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು.” ಎಂದು ಬರೆದುಕೊಂಡಿದ್ದಾರೆ.

ಸೈನಾ ಮತ್ತು ಪರುಪಳ್ಳಿ ಡಿಸೆಂಬರ್ 14, 2018 ರಂದು ವಿವಾಹವಾದರು. ಹರಿಯಾಣದ ಹಿಸಾರ್‌ನಲ್ಲಿ ಜನಿಸಿದ ಸೈನಾ, ಪರುಪಳ್ಳಿ ಕಶ್ಯಪ್‌ಗಿಂತ 3 ವರ್ಷ ಚಿಕ್ಕವರು. ಮದುವೆಯ ಸಮಯದಲ್ಲಿ, ಪರುಪಳ್ಳಿಗೆ 31 ವರ್ಷ ಮತ್ತು ಸೈನಾ ನೆಹ್ವಾಲ್‌ಗೆ 28 ವರ್ಷ. 30 ನೇ ವಯಸ್ಸಿನಲ್ಲಿ, ಸೈನಾ ಕೂಡ ರಾಜಕೀಯ ಪ್ರವೇಶಿಸಿದರು, ಅವರು 2020 ರಲ್ಲಿ ಬಿಜೆಪಿ ಪಕ್ಷವನ್ನು ಸೇರಿದರು.
Comments are closed.