Home News Hosuru: ಶಾಲಾ ಬಸ್‌ ಮತ್ತು ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿ: ಆಟೋ ಚಾಲಕ ಪಾರು

Hosuru: ಶಾಲಾ ಬಸ್‌ ಮತ್ತು ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿ: ಆಟೋ ಚಾಲಕ ಪಾರು

Hindu neighbor gifts plot of land

Hindu neighbour gifts land to Muslim journalist

Hosuru: ಶಾಲಾ ಬಸ್‌ ಮತ್ತು ಲಾರಿ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾಗಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಚಾಲಕ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಹೊಸೂರು ಮುಖ್ಯರಸ್ತೆಯ ಕೂಡ್ಲುಗೇಟ್‌ ಬಳಿ ಈ ಅಪಘಾತ ನಡೆದಿದೆ.

ಕೂಡ್ಲು ಗೇಟ್‌ ಬಳಿ ಹೋಗುತ್ತಿದ್ದಾಗ ಶಾಲಾ ಬಸ್‌ನ ಚಾಲಕ ದಿಢೀರ್‌ ಬ್ರೇಕ್‌ ಹಾಕಿದ್ದು, ಹೀಗಾಗಿ ಇದರಿಂದ ಹಿಂದೆ ಇದ್ದ ಆಟೋ ಚಾಲಕ ಕೂಡಾ ಬ್ರೇಕ್‌ ಹಾಕಿದ್ದಾನೆ. ಆಟೋ ಹಿಂದಿದ್ದ ಲಾರಿ ಚಾಲಕ ಬ್ರೇಕ್‌ ಹಾಕದೇ ಆಟೋಗೆ ಡಿಕ್ಕಿ ಹೊಡೆದಿದ್ದ, ಪರಿಣಾಮ ಶಾಲಾ ಬಸ್‌ ಮತ್ತು ಲಾರಿ ನಡುವೆ ಆಟೋ ಅಪ್ಪಚ್ಚಿಯಾಗಿದೆ.

ಕೂಡಲೇ ಸ್ಥಳೀಯರು ಬಂದು ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಆದರೆ ಆಟೋ ಸಂಪೂರ್ಣ ನಜ್ಜುಗುಜ್ಜಾಗಿದೆ. ಲಾರಿ ಚಾಲಕ ರೀಲ್ಸ್‌ ನೋಡಿಕೊಂಡು ವಾಹನ ಚಲಾಯಿಸಿದ್ದು, ಘಟನೆಗೆ ಕಾರಣ ಎನ್ನುವ ಆರೋಪದ ಕುರಿತು ವರದಿಯಾಗಿದೆ.

ಇದನ್ನೂ ಓದಿ:Coconut Rate: ಗಗನಕ್ಕೇರಿದ ತೆಂಗಿನಕಾಯಿ ದರ – ಗರಿ ರೋಗದಿಂದ ಕಡಿಮೆಯಾದ ತೆಂಗಿನಕಾಯಿ ಇಳುವರಿ