Hariyana: ತನ್ನ 66 ವರ್ಷದ ಅಜ್ಜಿಯನ್ನೇ ಮದುವೆಯಾದ 21 ವರ್ಷದ ಮೊಮ್ಮಗ – ಅಜ್ಜ ಸತ್ತ ಬಳಿಕ ‘ಏನೇನೋ’ ಆಯ್ತು ಗೊತ್ತಾ?

Hariyana: ಇತ್ತೀಚಿನ ದಿನಗಳಲ್ಲಿ ನಡೆಯುವ ಕೆಲವೊಂದು ಮದುವೆಗಳನ್ನು ನೋಡಿದರೆ ಅಳಬೇಕು ನಗಬೇಕು ಎಂಬುದೇ ತಿಳಿಯುವುದಿಲ್ಲ. ಕಾಲ ಕೆಟ್ಟೋಗಿದೆಯೋ ಅಥವಾ ನಾವು ಕೆಟ್ಟು ಹೋಗುತ್ತಿದ್ದೇವು ಎಂಬುದೇ ಇವುಗಳನ್ನೆಲ್ಲ ನೋಡಿದಾಗ ಹುಟ್ಟಿಕೊಳ್ಳುವ ಗೊಂದಲಗಳು. ಇದೀಗ ಅಂತದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ಸುಮಾರು 21 ವರ್ಷದ ಯುವಕ ತನ್ನ 66 ವರ್ಷದ ಅರ್ಜಿಯನ್ನೇ ಮದುವೆಯಾಗಿದ್ದಾನೆ.

ಹೌದು, ಕೆಲವು ದಿನಗಳ ಹಿಂದಷ್ಟೇ ಚಿತ್ರದುರ್ಗದಲ್ಲಿ 24 ವರ್ಷದ ಅಳಿಯ ತನ್ನ 54 ವರ್ಷದ ಅತ್ತೆಯೊಂದಿಗೆ ಪರಾರಿಯಾಗಿದ್ದ. ಇದರ ಬೆನ್ನಲ್ಲೇ ಹರಿಯಾಣದ ಒಂದು ಮದುವೆ ಪ್ರಸಂಗ ಬೆಳಕಿಗೆ ಬಂದಿದೆ. ಅದರಲ್ಲಿ 21 ವರ್ಷದ ವ್ಯಕ್ತಿಯೊಬ್ಬ ತನ್ನ 66 ವರ್ಷದ ಅಜ್ಜಿಯನ್ನ ಮದುವೆಯಾಗಿದ್ದಾನೆ. ಈ ಘಟನೆ ಆ ಪ್ರದೇಶದಲ್ಲಿ ದೊಡ್ಡ ವಿವಾದವನ್ನು ಸೃಷ್ಟಿಸಿದೆ.
ಮಾಹಿತಿಯ ಪ್ರಕಾರ, 21 ವರ್ಷದ ಮೊಹಮ್ಮದ್ ಇರ್ಫಾನ್ ತನ್ನ ಅಜ್ಜಿ ಸುಲ್ತಾನಾ ಖಾತುನ್’ಳನ್ನ ವಿವಾಹವಾಗಿದ್ದಾನೆ. ಸುಲ್ತಾನಾಳ ಪತಿಯ ಮರಣದ ನಂತರ, ಇರ್ಫಾನ್ ತನ್ನ ಅಜ್ಜಿ ಸುಲ್ತಾನಾಳನ್ನ ನೋಡಿಕೊಳ್ಳುತ್ತಿದ್ದ. ಇದು ಇಬ್ಬರ ನಡುವಿನ ಸಂಬಂಧವನ್ನ ಬಲಪಡಿಸಿತು. ಮೊಹಮ್ಮದ್ ತನ್ನ ಅಜ್ಜಿಯ ಕಷ್ಟದ ಸಮಯದಲ್ಲಿ ಅವಳನ್ನ ನೋಡಿಕೊಂಡನು. ಇದರ ನಂತರ, ಈ ಸಂಬಂಧವು ಪ್ರಣಯಕ್ಕೆ ತಿರುಗಿತು. ನಂತ್ರ ಈ ಸಂಬಂಧವು ಮದುವೆಗೆ ತಿರುಗಿತು.
ಗ್ರಾಮಸ್ಥರು ಮತ್ತು ಸಂಬಂಧಿಕರು ಈ ಸಂಬಂಧವನ್ನ ತೀವ್ರವಾಗಿ ವಿರೋಧಿಸಿದ್ದಾರೆ ಮತ್ತು ತೀವ್ರ ಕೋಪವನ್ನು ವ್ಯಕ್ತಪಡಿಸಿದ್ದಾರೆ. ಆದರೂ, ಇರ್ಫಾನ್ ಮತ್ತು ಸುಲ್ತಾನಾ ತಮ್ಮ ನಿರ್ಧಾರಕ್ಕೆ ದೃಢವಾಗಿದ್ದಾರೆ.
ಇದನ್ನೂ ಓದಿ:Heart Attack: ಮಕ್ಕಳಲ್ಲಿ ಹೃದಯಾಘಾತಕ್ಕೆ ಮೊಬೈಲ್ ಬಳಕೆ ಕಾರಣ; ಆಘಾತಕಾರಿ ವರದಿ ಬಹಿರಂಗ
Comments are closed.