Home News UP: ‘ಜಸ್ಟ್ ಟಚ್ ಮಾಡಿದ್ರೂ ತುಂಡು ತುಂಡಾಗಿ ಕತ್ತರಿಸ್ತೀನಿ’ – ಫಸ್ಟ್ ನೈಟ್ ಮೂಡಲ್ಲಿದ್ದ ವರನಿಗೆ...

UP: ‘ಜಸ್ಟ್ ಟಚ್ ಮಾಡಿದ್ರೂ ತುಂಡು ತುಂಡಾಗಿ ಕತ್ತರಿಸ್ತೀನಿ’ – ಫಸ್ಟ್ ನೈಟ್ ಮೂಡಲ್ಲಿದ್ದ ವರನಿಗೆ ಶಾಕ್ ಕೊಟ್ಟ ನವ ವಧು

Hindu neighbor gifts plot of land

Hindu neighbour gifts land to Muslim journalist

UP: ಫಸ್ಟ್ ನೈಟ್ ದಿನ ತನ್ನ ಹೆಂಡತಿಯ ಜೊತೆ ಸುಖದ ಸುಪ್ಪತ್ತಿಗೆಯಲ್ಲಿ ತೇಲಬೇಕು ಎಂದುಕೊಂಡಿದ್ದ ವರನಿಗೆ ವಧು ‘ನನ್ನನ್ನು ಮುಟ್ಟಿದರೆ ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ. ನೀನು 35 ಪೀಸ್ ಆಗುವೆ. ನಾನು ಅಮನ್‌ಗೆ ಮಾತ್ರ ಸೇರಿದವಳು…! ಬೆದರಿಕೆ ಹಾಕಿದ ವಿಚಿತ್ರ ಪ್ರಕರಣ ಒಂದು ಬೆಳಕಿಗೆ ಬಂದಿದೆ.

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕ್ಯಾಪ್ಟನ್‌ ನಿಶಾದ್‌ ಎಂಬುವವರು ಸಿತಾರ ಎಂಬ ವಧುವನ್ನು ವಿವಾಹವಾಗಿದ್ದರು. ಮೊದಲ ರಾತ್ರಿಯ ಕನಸು ಕಂಡಿದ್ದ ಪತಿರಾಯನಿಗೆ ತನ್ನ ಪತ್ನಿಯಿಂದ ಇಂಥ ಸಿಡಿಲಿನ ಸುದ್ದಿ ಬರುತ್ತದೆ ಎಂದು ಕನಸುಮನಸಿನಲ್ಲೂ ಊಹೆ ಮಾಡಿರಲಿಲ್ಲ.ನನ್ನನ್ನು ಮುಟ್ಟಿದರೆ ನೀನು 35 ತುಂಡುಗಳಾಗಿ ಕಾಣುವೆ ಎಂದು ಎಚ್ಚರಿಸುತ್ತಾ ಕೋಣೆಯ ಒಂದು ಮೂಲೆಯಲ್ಲಿ ಮೌನವಾಗಿ ಕುಳಿತು, ಮುಸುಕಿನ ಕೆಳಗೆ ಹರಿತವಾದ ಚಾಕು ಹಿಡಿದಿದ್ದಳು. ಬಳಿಕ ವರ ಮಧ್ಯರಾತ್ರಿಯಲ್ಲಿ ತನ್ನ ಜೀವ ಉಳಿದರೆ ಸಾಕು ಎಂದು ಕೊಣೆಯಿಂದ ತಪ್ಪಿಸಿಕೊಂಡು ಹೊರಬಂದಿದ್ದಾನೆ.

ನಾನು ಕೋಣೆಗೆ ಪ್ರವೇಶಿಸಿದಾಗ, ಅವಳು ಸಂಪೂರ್ಣವಾಗಿ ಮುಸುಕು ಧರಿಸಿ, ಚಾಕು ಹಿಡಿದು ಸದ್ದಿಲ್ಲದೆ ಕುಳಿತಿದ್ದಳು. ಆ ಇಡೀ ರಾತ್ರಿ, ಅವಳು ಚಾಕುವಿನಿಂದ ಹಾಸಿಗೆಯ ಮೇಲೆ ಇದ್ದಾಗ ನಾನು ಸೋಫಾದ ಮೇಲೆ ಕುಳಿತಿದ್ದೆ. ನನಗೆ ನಿದ್ದೆ ಮಾಡುವ ಧೈರ್ಯ ಬರಲಿಲ್ಲ ಎಂದು ಕ್ಯಾಪ್ಟನ್‌ ನಿಶಾದ್‌ ತನ್ನ ಮೊದಲ ರಾತ್ರಿಯ ಕಹಿ ಅನುಭವವನ್ನು ನೊಂದು ಹೇಳಿಕೊಂಡಿದ್ದಾರೆ.

ಇದು ಮೂರು ರಾತ್ರಿಗಳ ಕಾಲ ನಡೆದಿದ್ದು, ಅವಳು ಮಧ್ಯರಾತ್ರಿಯ ನಂತರವೇ ಮಲಗುತ್ತಿದ್ದಳು. ಅವಳು ನನ್ನ ನಿದ್ರೆಯಲ್ಲಿ ನನ್ನನ್ನು ಇರಿದು ಹಾಕಬಹುದೆಂಬ ಭಯದಿಂದ ನಾನು ಎಚ್ಚರವಾಗಿದ್ದೆ. ಎಂದಿದ್ದಾರೆ. ಅಲ್ಲದೆ ಅವರು ಮೇ 3ರಂದು, ಮಾನಸಿಕ ಒತ್ತಡವನ್ನು ಸಹಿಸಲಾಗದೆ ನಿಶಾದ್‌ ತನ್ನ ತಾಯಿಯೊಂದಿಗೆ ಎಲ್ಲವನ್ನೂ ಹಂಚಿಕೊಂಡಿದ್ದಾರೆ. ಸಿತಾರ ಮುಖಾಮುಖಿಯಾದಾಗ ಮನೆಯಲ್ಲಿ ಅವ್ಯವಸ್ಥೆ ಭುಗಿಲೆದ್ದಿತು. ಬಳಿಕ ಅವಳು ನಾನು ಅಮನ್‌ನನ್ನು ಪ್ರೀತಿಸುತ್ತೇನೆ. ನಾನು ಬಲವಂತದಿಂದ ಮಾತ್ರ ಮದುವೆಯಾಗಿದ್ದೆ. ನಾನು ಅವನೊಂದಿಗೆ ವಾಸಿಸಲು ಬಯಸುತ್ತೇನೆ – ಅವನಿಗೆ ಮಾತ್ರ ನನ್ನೊಂದಿಗೆ ಮದುವೆಯ ರಾತ್ರಿ ಕಳೆಯುವ ಹಕ್ಕಿದೆ ಎಂದು ಅಳುಕಿಲ್ಲದೆ ಹೇಳಿದ್ದಾಳೆ.

ಕೊನೆಗೆ ವಧುವಿನ ಪೋಷಕರಿಗೆ ವರನ ಪೋಷಕರು ಕರೆ ಮಾಡಿ ಬರ ಹೇಳಿ ಸಮಸ್ಯೆಗಳನ್ನು ರಾಜಿ ಮೂಲಕ ಬಗೆಹರಿಸಿಕೊಳ್ಳಲಾಯಿತು. ಸಿತಾರಾ ಹೇಗೋ ತಾನು ಗಂಡನೊಂದಿಗೆ ಬದುಕುತ್ತೇನೆ ಎಂದು ಒಪ್ಪಿಕೊಂಡಳು. ಆದರೆ ಕೆಲವೇ ದಿನಗಳಲ್ಲಿ ಅವಳು ಮನೆ ಬಿಟ್ಟು ಪರಾರಿಯಾಗಿದ್ದಾಳೆ.

ಇದನ್ನೂ ಓದಿ: Tigers Death: ವಿಷಪ್ರಾಶನದಿಂದ ಐದು ಹುಲಿಗಳ ಸಾವು – ಹುಲಿಗಳು ಪಂಚಭೂತಗಳಲ್ಲಿ ಲೀನ