Mangaluru: ಹೆಣ ಹೂತಿದ್ದ ಸ್ಥಳ ಗುರುತು ಮಾಡುವೆ: ಅಪರಿಚಿತ ವ್ಯಕ್ತಿ ಹೇಳಿಕೆ, ಎಸ್‌ಪಿ ಭೇಟಿಗೆ ಮಂಗಳೂರಿಗೆ ಬಂದ ವಕೀಲರ ತಂಡ

Mangaluru: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇತ್ತೀಚೆಗೆ ವ್ಯಕ್ತಿಯೊಬ್ಬ ಪೊಲೀಸರ ಮುಂದೆ ಹೇಳಿದ್ದ ವಿಚಾರಗಳ ಕುರಿತು ಇದೀಗ ಬೆಂಗಳೂರಿನ ವಕೀಲರ ತಂಡ ಮಂಗಳೂರು ಎಸ್‌ಪಿ ಕಚೇರಿಗೆ ಆಗಮಿಸಿದೆ.

ದ.ಕ. ಎಸ್ಪಿಯನ್ನು ಭೇಟಿಯಾಗಿ ದಾಖಲೆ ನೀಡುವುದಾಗಿ ಇತ್ತೀಚೆಗೆ ವಕೀಲರೊಬ್ಬರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಎಸ್‌ಪಿ ಭೇಟಿಗಾಗಿ ವಕೀಲರ ತಂಡ ಮಂಗಳೂರಿಗೆ ಆಗಮಿಸಿದ್ದು. ತುರ್ತು ಕೆಲಸದ ನಿಮಿತ್ತ ಎಸ್‌ಪಿ ಡಾ. ಅರುಣ್ ಬೆಂಗಳೂರಿಗೆ ಹೋಗಿದ್ದಾರೆ ಎನ್ನಲಾಗಿದ್ದು, ನಾಳೆ ಮತ್ತೆ ಭೇಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ;Viajyapura: ಸಾಲ ಮರುಪಾವತಿ ಮಾಡದ ಕಾರಣ ವ್ಯಕ್ತಿಯನ್ನೇ ಒತ್ತೆಯಾಳಾಗಿ ಇಟ್ಟುಕೊಂಡ ಸಾಲದಾತ
Comments are closed.