Crime: ತುರಿಯುವ ಮಣೆಯಿಂದ ಹೊಡೆದು ವೃದ್ಧೆ ಪತ್ನಿಯ ಕೊಲೆ ಮಾಡಿದ ಪತಿ

Crime: ಅಡುಗೆಮನೆ ವಿಚಾರದಲ್ಲಿ ಗಲಾಟೆ ನಡೆದು ಪತಿಯೇ ಪತ್ನಿಯನ್ನು ಕೊಂದಿರುವ ಘಟನೆ ಬೆಂಗಳೂರಿನ ಮಾಗಡಿ ತಾಲೂಕಿನ ಮತ್ತಿಕೆರೆಯಲ್ಲಿ ನಡೆದಿದೆ.

ತಿಮ್ಮಮ್ಮ (65) ಮೃತ ದುರ್ದೈವಿಯಾಗಿದ್ದು, ರಂಗಯ್ಯ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಡುಗೆ ಮನೆಯ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ನಡೆದಿದ್ದು ಪತಿ ರಂಗಯ್ಯ ತುರಿಯುವ ಮನೆಯಿಂದ ಪತ್ನಿ ತಿಮ್ಮಮ್ಮ ಗೆ ಹೊಡಿದು ಭೀಕರವಾಗಿ ಕೊಲೆ ಮಾಡಿದ್ದು, ಆನಂತರ ತಿರುಪತಿಗೆ ಪರಾರಿ ಆಗಲು ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಈ ಪ್ರಕರಣ ಮಾಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಪೊಲೀಸರು ಆರೋಪಿಯನ್ನು ಹಿಡಿದು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ;Ankola: ಅಪ್ಪನೊಂದಿಗೆ ದನದ ಕೊಟ್ಟಿಗೆ ಹೋದ ಎರಡು ವರ್ಷದ ಮಗು: ಗೊಬ್ಬರದ ಗುಂಡಿಯಲ್ಲಿ ಬಿದ್ದು ಸಾವು
Comments are closed.