Puttur: ಪುತ್ತೂರು: ಪಿಎಂಶ್ರೀ ವೀರಮಂಗಲ ಶಾಲೆಗೆ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರ ಭೇಟಿ!

Share the Article

Puttur: ಪುತ್ತೂರು (puttur) ತಾಲೂಕಿನ ಪಿಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವೀರಮಂಗಲ ಇಲ್ಲಿಗೆ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಶ್ರೀ ಗೋವಿಂದ ಮಡಿವಾಳ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಲೋಕೇಶ್‌ ಎಸ್‌ ಆರ್‌ , ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಶ್ರೀ ಚಕ್ರಪಾಣಿಯವರು ಭೇಟಿನೀಡಿ ಶೈಕ್ಷಣಿಕ ಚಟುವಟಿಕೆಗಳ ಪರಿಶೀಲನೆ ನಡೆಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಿಎಂಶ್ರೀ ಯೋಜನೆಗಳನ್ನು ಪರಿವೀಕ್ಷಣೆ ಮಾಡಿದರು. ನಂತರ ಮಧ್ಯಾಹ್ನದ ಬಿಸಿ ಊಟ ಸವಿದರು.

ಶಾಲಾ ಮುಖ್ಯಗುರು ತಾರಾನಾಥ ಸವಣೂರು,ಶಿಕ್ಷಕರಾದ ಹರಿಣಾಕ್ಷಿ ಎಂ,ಶೋಭಾ,ಶ್ರೀಲತಾ,ಕವಿತಾ,ಹೇಮಾವತಿ ಶಿಲ್ಪರಾಣಿ, ಸೌಮ್ಯ ಹಿಮತ್ ಕೆ ಇವರೊಂದಿಗೆ ಶೈಕ್ಷಣಿಕವಾಗಿ ಚರ್ಚಿಸಿ ಮಾರ್ಗದರ್ಶನ ನೀಡಿದರು.

Comments are closed.