Indigo : ‘ನೀನು ವಿಮಾನ ಓಡಿಸಲು ಲಾಯಕ್ಕಲ್ಲ, ಹೋಗಿ ಚಪ್ಪಲಿ ಹೊಲಿ’ – ಇಂಡಿಗೋ ದಲಿತ ಟ್ರೈನಿ ಪೈಲಟ್‌ಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳ

Share the Article

Indigo : ಇಂಡಿಗೋದ ತರಬೇತಿ ನಿರತ ಪೈಲಟ್ ಒಬ್ಬರು ‘ನೀನು ವಿಮಾನ ಚಲಾಯಿಸಲು ಯೋಗ್ಯನಲ್ಲ. ಹೋಗಿ ಚಪ್ಪಲಿಗಳನ್ನು ಹೊಲಿ’ ಎಂದು ಹೇಳುವ ಮೂಲಕ ಮೂವರು ಹಿರಿಯ ಅಧಿಕಾರಿಗಳು ತನ್ನನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

35 ವರ್ಷದ ತರಬೇತಿನಿರತ ಪೈಲಟ್ ಒಬ್ಬರಿಗೆ ಹಿರಿಯ ಅಧಿಕಾರಿಗಳು ಈ ರೀತಿಯಾದ ಹಾಕಿದ್ದಾರೆ. ಅವರು ದಲಿತರಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಪೊಲೀಸರು ಇಂಡಿಗೋ ಅಧಿಕಾರಿಗಳಾದ ತಪಸ್ ಡೇ, ಮನೀಶ್ ಸಾಹ್ನಿ ಮತ್ತು ಕ್ಯಾಪ್ಟನ್ ರಾಹುಲ್ ಪಾಟೀಲ್ ವಿರುದ್ಧ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ವರದಿಯ ಪ್ರಕಾರ, ದೂರುದಾರರು ಮೊದಲು ಬೆಂಗಳೂರಿನ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಲ್ಲಿನ ಪೊಲೀಸರು ಶೂನ್ಯ ಎಫ್‌ಐಆರ್ ದಾಖಲಿಸಿದ್ದು, ಈ ಎಫ್‌ಐಆರ್ ಅನ್ನು ಈಗ ಇಂಡಿಗೋ ಪ್ರಧಾನ ಕಚೇರಿ ಇರುವ ಗುರುಗ್ರಾಮಕ್ಕೆ ವರ್ಗಾಯಿಸಲಾಗಿದೆ. 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ, ‘ನೀನು ವಿಮಾನ ಚಲಾಯಿಸಲು ಯೋಗ್ಯನಲ್ಲ, ಹಿಂತಿರುಗಿ ಹೋಗಿ ಚಪ್ಪಲಿ ಹೊಲಿ. ನೀನು ಇಲ್ಲಿ ವಾಚ್‌ಮೆನ್ ಆಗಲು ಸಹ ಅರ್ಹನಲ್ಲ’ ಎಂದು ಹೇಳಲಾಗಿದೆ ಎಂದು ದೂರಿದ್ದಾರೆ.

ನನಗೆ ಕಿರುಕುಳ ನೀಡಿದ್ದು, ನಾನು ರಾಜೀನಾಮೆ ನೀಡುವಂತೆ ಒತ್ತಾಯಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಈ ರೀತಿಯ ಅವಹೇಳನಕಾರಿ ಹೇಳಿಕೆಗಳು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯ ಗುರುತನ್ನು ಕುಗ್ಗಿಸುವ ಗುರಿಯನ್ನು ಹೊಂದಿವೆ ಎಂದು ತರಬೇತಿನಿರತ ಪೈಲಟ್ ಹೇಳಿದ್ದಾರೆ.

ಇದನ್ನೂ ಓದಿ: Shocking : ಪ್ರೀತಿ ನಿರಾಕರಿಸಿದ ಯುವಕ – ಸೇಡು ತೀರಿಸಿಕೊಳ್ಳಲು 12 ರಾಜ್ಯಗಳಿಗೆ ಭಯ ಹುಟ್ಟಿಸಿದ ಯುವತಿ!!

Comments are closed.