Air India: ಗುಜರಾತ್‌ವಿಮಾನದ ಅವಶೇಷದ ಅಡಿಯಲ್ಲಿ ಸುರಕ್ಷಿತವಾಗಿ ಪತ್ತೆಯಾದ ಭಗವದ್ಗೀತೆ

Share the Article

Air India: 242 ಪ್ರಯಾಣಿಕರಿದ್ದ ಏರ್‌ ಇಂಡಿಯಾ ವಿಮಾನ ಗುಜರಾತಿನ ಅಹ್ಮದಾಬಾದ್‌ನಲ್ಲಿ ಪತನಗೊಂಡಂತಹ ಆಘಾತಕಾರಿ ಘಟನೆ ಗುರುವಾರ ಸಂಭವಿಸಿದೆ. ಈ ಅಪಘಾತವನ್ನು ವಿಮಾನ ಅಪಘಾತಗಳ ಇತಿಹಾಸದಲ್ಲೇ ಅತ್ಯಂತ ದೊಡ್ಡ ಅಪಘಾತವೆಂದು ಪರಿಗಣಿಸಲಾಗಿದೆ.

ದುರಂತದಲ್ಲಿ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸೇರಿದಂತೆ ಒಟ್ಟು 246 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಅಪಘಾತದಲ್ಲಿ ಎಲ್ಲವೂ ಸುಟ್ಟು ಭಸ್ಮವಾಗಿದ್ದು, ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇನ್ನೂ ಈ ಅಪಘಾತ ಸಂಭವಿಸಿದ ಸ್ಥಳದಲ್ಲಿನ ರಕ್ಷಣಾ ಕಾರ್ಯಾಚರಣೆಯ ವೇಳೆ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆಯೊಂದು ಸಿಕ್ಕಿದ್ದು, ಎಲ್ಲವೂ ಸುಟ್ಟುಕರಕಲಾದರೂ ಈ ಭಗವದ್ಗೀತೆಯ ಪುಸ್ತಕ ಮಾತ್ರ ಏನು ಆಗದೇ ಇದ್ದಿದ್ದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.

ಸುಟ್ಟುಕರಕಲಾದ ಅವಶೇಷಗಳ ಅಡಿಯಲ್ಲಿ ಭಗವದ್ಗೀತೆ ಸುರಕ್ಷಿತವಾಗಿ ಪತ್ತೆಯಾಗಿದ್ದು, ಇದರ ಸತ್ಯಾಸತ್ಯತೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Mangaluru Plane Crash: ಮಂಗಳೂರು ವಿಮಾನ ದುರಂತಕ್ಕೆ 15 ವರ್ಷ, ಅಂದು ಪೈಲಟ್ ಗ್ಲುಸಿಕಾ ಮಾಡಿದ್ದ ತಪ್ಪೇನು?

Comments are closed.