Tulsi Plant: ತುಳಸಿಯನ್ನು ಅಗಿದು ತಿಂದರೆ ಅಪಾಯ ಕಟ್ಟಿಟ್ಟ ಬುತ್ತಿ

Tulsi Plant: ಹಿರಿಯರು ತೋರಿಸಿಕೊಟ್ಟ ಪ್ರತಿ ಮಾರ್ಗವು ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯಕ್ಕೆ ಹಾಗೂ ಜೀವನಕ್ಕೆ ಹಿತವನ್ನೇ ನೀಡುತ್ತವೆ. ಅದರಲ್ಲಿ ತುಳಸಿ ಕೂಡ ಒಂದು.

ಇದು ಧರ್ಮ ಮತ್ತು ವಿಜ್ಞಾನ ಎರಡರ ದೃಷ್ಟಿಕೋನದಿಂದ ಒಳ್ಳೆಯದಾಗಿದ್ದು, ತುಳಸಿಯ ಪೂಜೆ ಮಾಡುವುದರಿಂದ ಮನೆಯಲ್ಲಿ ನೆಮ್ಮದಿ, ಸಂತೋಷ ಎಲ್ಲವೂ ನೆಲೆಸಿರುತ್ತದೆ. ಹಾಗೂ ಇದನ್ನು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ತುಳಸಿ ಎಲೆಗೆ ಹಲ್ಲುಗಳು ಸ್ಪರ್ಶಿಸಬಾರದು, ಇದರಿಂದ ಕೆಟ್ಟ ರಸಗಳು ಉತ್ಪತ್ತಿಯಾಗುತ್ತದೆ. ಹಾಗೂ ಇದು ದೇಹದ ಮೇಲೆ ದೊಡ್ಡ ಪರಿಣಾವನ್ನು ಉಂಟು ಮಾಡುತ್ತದೆ. ಇಲ್ಲಿ ತುಳಸಿ ತಿನ್ನಬಾರದು ಎಂದು ಹೇಳುತ್ತಿಲ್ಲ. ಆದರೆ ಅದನ್ನು ಅಗಿದು ತಿನ್ನುವುದರಿಂದ ಅನೇಕ ಅಪಾಯಗಳು ಇವೆ.
ತುಳಸಿ ಎಲೆಗಳಲ್ಲಿ ಪಾದರಸದಂತಹ ಅಂಶಗಳು ಇರುವುದರಿಂದ ಇದು ಬಾಯಿಗೆ ಹಾನಿಕಾರಕ. ಪ್ರತಿದಿನ ತುಳಸಿಯನ್ನು ಅಗಿಯುತ್ತಿದ್ದರೆ, ಅದು ನಿಧಾನವಾಗಿ ಹಲ್ಲಿನ ದಂತಕವಚವನ್ನು ಹಾಳು ಮಾಡುತ್ತದೆ. ಹಾಗೂ ಇದರಿಂದಾಗಿ ಹಲ್ಲುಗಳು ಸೂಕ್ಷ್ಮವಾಗುತ್ತವೆ. ಅಲ್ಲದೆ, ಇದರ ಎಲೆಗಳ ಸೌಮ್ಯವಾದ ಕಟುತ್ವವು ಬಾಯಿಯಲ್ಲಿ ಕಿರಿಕಿರಿ ಮತ್ತು ಗಾಯಗಳನ್ನು ಉಂಟುಮಾಡಬಹುದು.
ಎಲೆಗಳನ್ನು ಜಗಿಯುವ ಬದಲು, ಅದರ ಕಷಾಯ ಅಥವಾ ಸಾರವನ್ನು ಕುಡಿಯಬೇಕು. ತುಳಸಿ ನೀರಿಗೆ ಜೇನುತುಪ್ಪ ಬೆರೆಸಿ ಕೂಡ ಸೇವಿಸಬಹುದು. ಇದರಿಂದ ಹಲ್ಲುಗಳು ಹಾನಿಗೊಳಗಾಗುವುದಿಲ್ಲ.
ಹಾಗೂ ತುಳಸಿ ಗಿಡಕ್ಕೆ ದೇವತೆಯ ಸ್ಥಾನಮಾನ ನೀಡಿರುವುದರಿಂದ ಅದರ ಸೇವನೆಯು ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದ್ದು, ತುಳಸಿಯನ್ನು ಅಗಿಯುವ ಅಥವಾ ಕತ್ತರಿಸುವ ಬದಲು, ಅದನ್ನು ನುಂಗಬೇಕು. ಅದನ್ನು ಹಲ್ಲುಗಳಿಂದ ಕಚ್ಚುವುದನ್ನು ಅವಮಾನವೆಂದು ಹೇಳಲಾಗುತ್ತದೆ.
Comments are closed.