Pratap Shimha: ‘ಶಾಲೆಗೆ ಹೊರಟಳು ನನ್ನ ಮಗಳು’ ಎಂದು ಪ್ರತಾಪ್ ಸಿಂಹ ಪೋಸ್ಟ್ – ‘ಹಾಗಿದ್ರೆ ಧರ್ಮರಕ್ಷಣೆ ಮಾಡುವುದು ಯಾರು?’ ಎಂದು ಬಂತು ಕಮೆಂಟ್

Pratap Simha: ರಾಜ್ಯದಲ್ಲಿ ಬೇಸಿಗೆ ರಜೆ ಮುಗಿದು ಶಾಲೆಗಳು ಪ್ರಾರಂಭವಾಗಿದೆ. ಪೋಷಕರು ಮಕ್ಕಳನ್ನು ಸಂತೋಷದಿಂದ ಶಾಲೆಗೆ ಮರಳಿ ಕಳಿಸುತ್ತಿದ್ದಾರೆ. ಅಂತಯೇ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಮಗಳ ಶಾಲೆಗೆ ಹೋಗುವ ಫೋಟೋವನ್ನು ಶೇರ್ ಮಾಡಿ ‘ಶಾಲೆಗೆ ಹೊರಟಳು ನನ್ನ ಮಗಳು’ ಎಂದು ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಕೆಲವರು ಉತ್ತಮವಾಗಿ ಪ್ರತಿಕ್ರಿಯೆ ನೀಡಿದರೆ ಇನ್ನು ಕೆಲವು ಕಿಡಿಗೇಡಿಗಳು ಬೇಡದ ಕಮೆಂಟ್ ಮಾಡಿದ್ದಾರೆ.

ಹೌದು, ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಂತೋಷದಿಂದ ಹಂಚಿಕೊಂಡಿರುವ ಪೋಸ್ಟ್ವೊಂದಕ್ಕೆ ಕಿಡಿಗೇಡಿಗಳು ಬಾಯಿಗೆ ಬಂದಂತೆ ಪೋಸ್ಟ್ ಮಾಡಿದ್ದಾರೆ. ಅಂದಹಾಗೆ ಪ್ರತಾಪ್ ಸಿಂಹ ಅವರು ‘ರಜೆ ಮುಗಿಯಿತು, ಇಂದಿನಿಂದ ಶಾಲೆಗೆ ಹೊರಟಳು ನನ್ನ ಮಗಳು…’ ಅಂತ ಚಂದದ ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ನಾನಾ ರೀತಿಯ ಕಾಮೆಂಟ್ಗಳು ಬಂದಿದೆ.
IPL 2025 Final: RCB vs PBKS Final: ಫೈನಲ್ ಪಂದ್ಯಕ್ಕೂ ಮುನ್ನ ಪಿಚ್ ವರದಿ ಏನು, ಟಾಸ್ ಗೆಲ್ಲುವುದು ಎಷ್ಟು ಮುಖ್ಯ
ಅದರಲ್ಲಿ ಮುರಳಿ ಎನ್ನುವವರು, ‘ಧರ್ಮ ರಕ್ಷಣೆ ಯಾರು ಮಾಡ್ತಾರೆ ?’ ಎಂದೂ ಕಮೆಂಟ್ ಮಾಡುವುದರ ಮೂಲಕ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೆ ತ್ರಿಶೂಲ ಹಿಡಿದು ಶಾಖೆಗೆ ಹೋಗೋದು ಬಿಟ್ಟು ಶಾಲೆಗೆ ಹೋದರೆ ಹಿಂದೂ ಧರ್ಮ ಕಾಪಾಡೋರು ಯಾರು ? ಧರ್ಮ ಕಾಪಾಡೋಕ್ಕೆ ಶಾಲೆಗೆ ಹೋಗ್ಬೇಕ ತ್ರಿಶೂಲ ಕೊಟ್ರೆ ಸಾಕಲ್ವಾ?… ಅದ್ಸರಿ ಕುಂಕುಮ ಗಿಂಕುಮ ಏನೂ ಜೋರಾಗಿ ಹಚ್ಚೇ ಇಲ್ಲ !!? ಹಿಂದೂ ಧರ್ಮದ ಹೆಣ್ಣು ಮಕ್ಕಳು ಈತರ ಬಟ್ಟೆ ಹಾಕ್ಬೋದ?.. ಬಡವರ ಮಕ್ಕಳಿಗೆ ಮಾತ್ರ ಇದೆಲ್ಲ ಅಪ್ಲೆ ಆಗೋದು ಅನ್ಸುತ್ತೆ ಅಲ್ವಾ…?.. ನಿನ್ನ ಮಗಳು ಮಾತ್ರ ಶಾಲೆಗೆ, ಬೇರೆಯವರ ಮಕ್ಳು ಹೊಡೆದಾಡಿ ಬೀದಿ ಹೆಣ ಆಗ್ಲಿ ಅಲ್ವಾ ಎನ್ನುವ ಕಮೆಂಟ್ಗಳನ್ನು ಜನ ಮಾಡಿದ್ದಾರೆ.
Bonnie Blue: 24 ಗಂಟೆಯಲ್ಲಿ 2,000 ಪುರುಷರೊಂದಿಗೆ ಸೆ*ಕ್ಸ್ – ಮತ್ತೊಂದು ಹುಚ್ಚಾಟಕ್ಕೆ ಮುಂದಾದ ಬೋನಿ ಬ್ಲೂ
ಇನ್ನೂ ಕೆಲವರು ಪ್ರತಾಪ್ ಸಿಂಹ ಅವರಿಗೆ ಸಂಸ್ಕೃತಿಯ ಪಾಠವನ್ನು ಮಾಡಿದ್ದಾರೆ. ಸರ್ ನೀವು ತಿಳಿದವರು, ಆದರೂ ಒಂದು ವಿನಂತಿ. ದಯವಿಟ್ಟು ಕತ್ತಲ್ಲಿ ಸರ, ಹಣೆಗೆ ಕುಂಕುಮ ಇರಲಿ, ಜಡೆಗೆ ಹೂವ ಮುಡಿಸಿ ಕಳುಹಿಸಿ. ನಿಮ್ಮಿಂದ ಪ್ರೇರಣೆ ಉಂಟಾಗಲಿ ಅಂತಲೂ ಹೇಳಿದ್ದಾರೆ. ಇದರೊಂದಿಗೆ ನಿಮ್ಮ ಮಗಳು ಶಾಲೆಗೆ, ಬಡವರ ಮಕ್ಕಳು ಬೀದಿಗೆ!.. ಸರ್ಕಾರಿ ಶಾಲೆ ಗೆ ಏನಕ್ಕೆ ಕಳಿಸಿಲ್ಲ ಸಾರ್ ತಾವು ತಮ್ಮ ಮಗಳನ್ನ ? ಎನ್ನುವ ಕಮೆಂಟ್ಗಳು ಬಂದಿವೆ.
CM Siddaramiah : ‘ತಿ*…. ಮುಚ್ಕೊಂಡ್ ಬಾರಯ್ಯ..’ – ಸಂಪುಟದ ಮಂತ್ರಿಗೆ ಸಿಎಂ ಸಿದ್ದು ಆವಾಜ್ !!
Comments are closed.