Ujire: ಉಜಿರೆ: ನಿಲ್ಲಿಸಿ ಹೋಗಿದ್ದ ಸಿವಿಲ್ ಕಂಟ್ರಾಕ್ಟರ್’ರ ಬುಲೆಟ್ ಬೈಕನ್ನು ಕದ್ದ ಚಾಲಾಕಿ ಕಳ್ಳ!

Ujire: ಉಜಿರೆ: ಬೈಕನ್ನು ನಿಲ್ಲಿಸಿ ತನ್ನ ಕಚೇರಿ ಕೆಲಸಕ್ಕೆ ತೆರಳಿದ್ದ ಸಿವಿಲ್ ಇಂಜಿನಿಯರ್ ಒಬ್ಬರ ಬುಲೆಟ್ ಬೈಕನ್ನು ಹಾಡು ಹಗಲೇ ಚಾಲಾಕಿ ಕಳ್ಳನೊಬ್ಬ ಚಾಣಾಕ್ಷತೆಯಿಂದ ಕದ್ದುಪರಾರಿಯಾದ ಘಟನೆ ಉಜಿರೆ ಪೇಟೆಯಲ್ಲಿ ಮೇ 31ರಂದು ನಡೆದಿದೆ.

ಕಳ೦ಜ ಗ್ರಾಮದ ಸಿವಿಲ್ ಇಂಜಿನಿಯರ್ ನವೀನ್ ಸಿ.ಕೆ ಎಂಬವರು ಇಂದಿನಂತೆ ತನ್ನ ಕೆ. ಎ 19 ಇ.ಎಚ್ 2576 ನಂಬರಿನ ಬುಲೆಟ್ ಬೈಕ್ ಅನ್ನು ಉಜಿರೆಯ ಎಂ.ಎಂ ಲಾಡ್ಜ್ ಬಳಿ ನಿಲ್ಲಿಸಿ ಕಚೇರಿಗೆ ಹೋಗಿದ್ದರು. ಆದರೆ ಅವರು ಸಂಜೆ 6:00 ಸುಮಾರಿಗೆ ಕಚೇರಿ ಬಿಟ್ಟು ತನ್ನ ಬೈಕಿನ ಬಳಿ ಬರುತ್ತಿದ್ದಂತೆ ಬೈಕು ಕಾಣೆಯಾಗಿತ್ತು.
ಸುತ್ತಮುತ್ತ ಹುಡುಕಾಡಿದರೂ ಬೈಕ್ ಪತ್ತೆ ಆಗಿರಲಿಲ್ಲ ಹೀಗಾಗಿ ಇವರು ಇದೀಗ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಸಿಸಿ ಟಿವಿ ದೃಶ್ಯಾವಳಿ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಹಾಡು ಹಗಲೇ ಜನ ಸಂಚಾರ ಇರುವ ವೇಳೆ ಈ ರೀತಿ ಚಾಣಾಕ್ಷತೆಯಿಂದ ಬೈಕನ್ನು ಕದ್ದ ಕಳ್ಳ ಬಹಳ ಚಾಲಾಕಿಯಾಗಿರುವ ಸಾಧ್ಯತೆಗಳಿವೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಬೈಕಿನ ಮೌಲ್ಯ1.20. ಲಕ್ಷ ರೂಪಾಯಿಗಳೆಂದು ತಿಳಿದು ಬಂದಿದೆ.
Comments are closed.