ವರ್ಷಧಾರೆಯ ನಡುವೆಯೇ ಶಾಲಾ ವರ್ಷಾರಂಭ; ಮಂಗಳೂರು ಡಿಸಿಯನ್ನ ಮತ್ತೆ ನೆನೆದು ಚಿಣ್ಣರ ನಡಿಗೆ ಶಾಲೆಯ ಕಡೆಗೆ!

ಮಂಗಳೂರು: ಧೋ ಧೋ… ಎಂದು ಎಡೆಬಿಡದೆ ಸುರಿವ ಮುಂಗಾರಿನ ಮಳೆ. ಜೊತೆಗೆ ಮೈ ಕೈಗೆ ಚಳಿಯ ಕಚಗುಳಿ ಇಡುತ್ತಾ ರಭಸವಾಗಿ ಬೀಸುವ ಕುಳಿರ್ಗಾಳಿ. ಈ ವರ್ಷ ಧಾರೆಯ ನಡುವೆಯೇ ಮಕ್ಕಳಿಗೆ ಮತ್ತೆ ಶಾಲಾ ವರ್ಷಾರಂಭವಾಗಿದೆ. ಹೀಗಾಗಿ ಈ ವರೆಗೆ ರಜೆಯ ಮಜಾವನ್ನ ನುಭವಿಸುತ್ತಿದ್ದ ದ.ಕ ಜಿಲ್ಲೆಯ ಶಾಲಾ ಮಕ್ಕಳೆಲ್ಲರೂ ರಜಾ ಮಜಾದ ಗುಂಗನ್ನು ಮೆಲುಕು ಹಾಕುತ್ತಲೇ, ಇನ್ನೊಂದೆಡೆ ರಜೆ ನೀಡುವ ಜಿಲ್ಲಾಧಿಕಾರಿಗಳೆoದೇ ಖ್ಯಾತಿಪಡೆದುಕೊಂಡಿರುವ ಮಕ್ಕಳ ಪ್ರೀತಿಯ ಈಗಿನ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರನ್ನು ನೆನಪಿಸಿಕೊಳ್ಳುತ್ತಲೇ ಮತ್ತೆ ಸ್ಕೂಲು ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಶಾಲೆಗಳಿಗೆ ಹೋಗಲು ಹೊರಟು ತಯಾರಾಗಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಿಂದ ಈ ವರೆಗೆ ಅಪ್ಪ, ಅಮ್ಮ, ಅಜ್ಜ,ಅಜ್ಜಿ, ಮನೆ ಮಂದಿಯೊಂದಿಗೆ ಆಟವನ್ನಾಡುತ್ತಾ, ಬೇಕು ಬೇಕಾದುದನ್ನೆಲ್ಲಾ ತಿಂದುಂಡು, ಹೊತ್ತು ಮಿರಿದರೂ ಮನಸೋ ಇಚ್ಛೆ ಮಲಗಿ ನಿದ್ರಿಸುತ್ತಾ, ಮನೆಯವರ ಮಾತೊಂದನ್ನೂ ಕೇಳದೆ ಲಗಾಡಿ ತೆಗೆದು ತಮ್ಮ ತಮ್ಮ ಪ್ರಪಂಚದಲ್ಲೇ ವಿಹರಿಸುತ್ತಿದ್ದ ಶಾಲಾ ಮಕ್ಕಳೆಲ್ಲಾ ಅನಿವಾರ್ಯವಾಗಿ ಇಂದಿನಿಂದ ಶಾಲಾ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಮತ್ತೆ ಶಾಲೆಯತ್ತ ಹೊರಡಲೇ ಬೇಕಾಗಿದೆ.
ಆದರೆ ಕಳೆದ ವರ್ಷ ದಕ ಜಿಲ್ಲೆಯಲ್ಲಿ ಶಾಲಾ ವರ್ಷಾರಂಭದಲ್ಲೇ ಬಿರುಗಾಳಿ, ಮಳೆ, ಪ್ರವಾಹಗಳ ರಂಪ ರಗಳೆಯಿಂದಾಗಿ ಶಾಲಾ ಕಾಲೇಜುಗಳಿಗೆ ಅನಿವಾರ್ಯವಾಗಿ ಜಿಲ್ಲಾಧಿಕಾರಿಗಳು ಸರಣಿ ರಜೆಗಳನ್ನು ಘೋಷಿಸುತ್ತಿದ್ದರಿಂದ ಖುಷಿಪಟ್ಟಿದ್ದ ಅದೆಷ್ಟೋ ಶಾಲಾ ಮಕ್ಕಳಿಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಅಚ್ಚುಮೆಚ್ಚಿನ ಜಿಲ್ಲಾಧಿಕಾರಿಗಳೆನಿಸಿಕೊಂಡಿದ್ದರು. ಮಾತ್ರವಲ್ಲ ಬಹುತೇಕ ಮಕ್ಕಳಿಗೆ ಜಿಲ್ಲಾಧಿಕಾರಿಗಳ ಹೆಸರು ಏನೆಂದು ಗೊತ್ತಿರಲಿಲ್ಲವಾದರೂ ‘ರಜೆ ಕೊಡುವ ಜಿಲ್ಲಾಧಿಕಾರಿಗಳೆದಂತೂ’ ಮಾತ್ರ ಸ್ಪಷ್ಟವಾಗಿ ತಿಳಿದಿತ್ತು.
ಇದೇ ಕಾರಣಕ್ಕಾಗಿಯೇ ದಕ ಜಿಲ್ಲೆಯಲ್ಲಿ ಈವರೆಗಿನ ಜಿಲ್ಲಾಧಿಕಾರಿಗಳಗಳ ಪೈಕಿ ಮಕ್ಕಳ ಮನಸ್ಸು ಗೆದ್ದು, ಮಕ್ಕಳ ಅಚ್ಚುಮೆಚ್ಚಿನ ಜಿಲ್ಲಾಧಿಕಾರಿಗಳೆನಿಸಿಕೊಂಡವರಲ್ಲಿ ಈಗಿನ ಜಿಲ್ಲಾಧಿಕಾರಿ ಮಲೈ ಮುಗಿಲನ್ ಮೊತ್ತ ಮೊದಲಿಗೆರೆನಿಸಿಕೊಂಡಿದ್ದಾರೆ.
ಮಕ್ಕಳಿಗೆ ಜಿಲ್ಲಾಧಿಕಾರಿ ಮಲೈ ಮುಗಿಲನ್ ಎಷ್ಟು ಅಚ್ಚುಮೆಚ್ಚಿಂದರೆ ಕಳೆದ ವರ್ಷ ಬಹುತೇಕ ಮಕ್ಕಳು ಜಿಲ್ಲಾಧಿಕಾರಿಗಳ ಮೊಬೈಲ್ ನಂಬರನ್ನು ಸಂಪರ್ಕಿಸಿ ‘ಸರ್ ಇವತ್ತು ನಮಗೆ ರಜೆ ಉಂಟಾ?’ ಎಂದು ಜಿಲ್ಲಾಧಿಕಾರಿಗಳನ್ನೇ ಪ್ರಶ್ನಿಸುವಷ್ಟರವರೆಗೆ ಜಿಲ್ಲಾಧಿಕಾರಿಗಳೊಂದಿಗೆ ಪ್ರೀತಿಯ ಸಲುಗೆಯನ್ನು ಹೊಂದಿದ್ದರು. ಒಂದು ಮಗುವಂತೂ ಡಿಸಿ ಮಲ್ಲೈ ಮುಗಿಳನ್ ರಿಗೇ ಫೋನ್ ಮಾಡಿ, ‘ ಇನಿ ಡಿಸಿಗೆ ರಜೆ ಉಂಡಾ?’ (ಇವತ್ತು ಡಿಸಿಗೆ ರಜೆ ಉಂಟಾ?) ಎಂದು ಅಮಾಯಕವಾಗಿ ಕೇಳಿತ್ತು. ಕಳೆದ ಮಳೆಗಾಲದ ಸಂದರ್ಭ ಆ ಮಗುವಿನ ಪ್ರಶ್ನೆ ಬಹಳ ಟ್ರೊಲ್ ಆಗಿ ಮಕ್ಕಳ- ಡಿಸಿ ಸಂಬಂಧವನ್ನು ಮತ್ತಷ್ಟು ಗಾಢವಾಗಿಸಿತ್ತು.
ಅದೇ ರೀತಿ ಒಮ್ಮೆ ಮಂಗಳೂರಿನ ಕಾರ್ಯಕ್ರಮವೊಂದರಲ್ಲಿ ಅಚಾನಕ್ಕಾಗಿ ಸಿಕ್ಕ ಜಿಲ್ಲಾಧಿಕಾರಿಗಳನ್ನು ಕಂಡ ಇಡೀ ಮಕ್ಕಳ ಸಮೂಹವೇ ಯಾರನ್ನೂ ಲೆಕ್ಕಿಸದೆ ಜಿಲ್ಲಾಧಿಕಾರಿಗಳನ್ನು ಸುತ್ತುವರಿದು ತಮ್ಮ ಪ್ರೀತಿಯನ್ನು ತೋರಿಸಿಕೊಂಡಿದ್ದ ಘಟನೆಯೂ ನಡೆದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇಂತಹ ಮಕ್ಕಳ ಪ್ರೀತಿಗೆ ಪಾತ್ರರಾಗಿ, ರಜೆ ಕೊಡುವ ಜಿಲ್ಲಾಧಿಕಾರಿಯೆಂದೇ ಮಕ್ಕಳಿಂದ ಖ್ಯಾತಿ ಪಡೆದಿರುವ ದಕ ಜಿಲ್ಲೆಯ ಈಗಿನ ಜಿಲ್ಲಾಧಿಕಾರಿ ಮಲ್ಲೈ ಮುಗಿಲನ್ ರನ್ನು ಈ ಬಾರಿಯೂ ವರ್ಷಧಾರೆಯ ನಡುವೆಯೇ ಶಾಲಾ ವರ್ಷಾರಂಭ ಗೊಂಡಿರುವುದರಿಂದ ಶಾಲಾ ಮಕ್ಕಳೆಲ್ಲರೂ ಕೇವಲ ರಜೆಯ ಉದ್ದೇಶಕ್ಕಾಗಿ ಮಾತ್ರವೇ ಅಲ್ಲದಿದ್ದರೂ ತಮ್ಮ ಮೇಲೆ ಜಿಲ್ಲಾಧಿಕಾರಿಗಳಿಗೆ ಇರುವ ಕಾಳಜಿ, ಅನುಕಂಪದ ಕಾರಣಕ್ಕಾದರೂ ಜಿಲ್ಲಾಧಿಕಾರಿಗಳನ್ನು ನೆನಪಿಸಿಕೊಳ್ಳುತ್ತಲೇ ಮತ್ತೆ ಶಾಲೆಯತ್ತ ಹೆಜ್ಜೆ ಹಾಕತೊಡಗಿದ್ದಾರೆ. ಜತೆಗೆ ಸಣ್ಣಗೆ ಮನದ ಮೂಲೆಯಲಿ ರಜೆ ಸಿಕ್ಕರೆ….ಅಂತ ದೂರಾಲೋಚನೆ ಕೂಡಾ ಇದೆ. ಒಂದೊಮ್ಮೆ ‘ ಡಿಸಿಗೆ ರಜೆ ಇದ್ದರೆ ‘ ಎಲ್ಲಿ ಯಾರ ಜತೆ ಆಟ ಹೊಡೆಯಬಹುದು ಅನ್ನೋ ಲೆಕ್ಕಾಚಾರ ಕೂಡಾ ಚಿಣ್ಣರ ಮನದಲ್ಲಿ ಸುತ್ತುತ್ತಿದೆ. ಅಪ್ಪ ಅಮ್ಮರ ಕಣ್ಣು ತಪ್ಪಿಸಿ, ಮನೆಯ ಇನ್ಯಾರ ಮೊಬೈಲಿನ ಮೂಲೆಯಲ್ಲಿ ಇನ್ಯಾವುದೋ ಹೊಸ ಗೇಮ್ ಡೌನ್ ಲೋಡ್ ಮಾಡಿ ಕಳ್ಳಾಟ ಆಡುವ ಸಂಚು ಕೂಡಾ ನಡೆದಿದೆ. ಹಾಗಾಗಿ ಮಳೆ ಜೋರಾಗಿ ಬರಲಿ. ‘ಡಿಸಿಗೆ ರಜೆ’ ಸಿಗಲಿ. ಪುಟಾಣಿಗಳ ರಜೆ ಒಂದೆರಡು ವಾರ ಮುಂದು ಬೀಳಲಿ ಅನ್ನುತ್ತಾ ಶಾಲೆಯ – ಆಟದ ಮದ್ಯೆ ಹೊಯ್ದಾಡುತ್ತಿರುವ ಮನಸ್ಸುಗಳಿಗೆ ಈ ಶೈಕ್ಷಣಿಕ ವರ್ಷದ ಶುಭಾಶಯಗಳು.
ಇಂದಿನಿಂದ ರಾಜ್ಯಾದ್ಯಂತ ಶಾಲೆಗಳು ಆರಂಭ
ಗುರುವಾರದಿಂದ 2025-26ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಲಿದ್ದು ಶಾಲೆಗಳು ತರಗತಿಗಳು ಸಹ ನಡೆಯಲಿದ್ದು ಬಿಸಿಯೂಟದ ಪಠ್ಯ ಪುಸ್ತಕಗಳ ವಿತರಣೆಯೂ ನಡೆಯಲಿದೆ. ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ಮಾಡಿಕೊಂಡಿವೆ. ಮೊದಲ ದಿನವೇ ಮಧ್ಯಾಹ್ನದ ಜತೆ ಸಿಹಿಯೂ ಇರಲಿದೆ. ಜತೆಗೆ ಉಚಿತ ಸಮವಸ್ತ್ರ ಮತ್ತು ಉಚಿತ ಪಠ್ಯ ಪುಸ್ತಕ ವಿತರಣೆಯು ನಡೆಯಲಿದೆ.
ಒಂದರಿಂದ ತರಗತಿಯವರೆಗೆ ಹತ್ತನೇ ರಾಜ್ಯದಲ್ಲಿರ 46 ಸಾವಿರ ಶಾಲೆಗಳು ತಮ್ಮ ಚಟುವಟಿಕೆಗಳನ್ನು ಆರಂಭಿಸಲಿವೆ. ಇದಕ್ಕೆ ಸಂಬಂಧಿಸಿದ ಶೈಕ್ಷಣಿಕ ವೇಳಾಪಟ್ಟಿ ಈಗಾಗಲೇ ಬಿಡುಗಡೆಯೂ ಆಗಿದೆ. ಇನ್ನು ಹಲವು ಖಾಸಗಿ ಶಾಲೆಗಳು ಈಗಾಗಲೇ ಶೈಕ್ಷಣಿಕ ಚಟುವಟಿಕೆ ಆರಂಭಿಸಿದ್ದು ಉಳಿದ ಶಾಲೆಗಳು ಸಹ ಗುರುವಾರದಿಂದ ಶೈಕ್ಷಣಿಕ ಚಟುವಟಿಕೆ ಶುರು ಆಗುತ್ತವೆ.
ಈ ಮಧ್ಯೆ ಶಾಲಾ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದ್ದು ಪ್ರಾರಂಭವಾಗುವ ಮುಂಚಿತವಾಗಿ ಸಂಪೂರ್ಣ ಶಾಲೆಯ ಸ್ವಚ್ಛತೆ ಕಾರ್ಯ ಕೈಗೊಂಡು ಪೂರ್ಣಗೊಳಿಸಬೇಕು. ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲ ಸೌಲಭ್ಯಗಳು ಸುಸ್ಥಿತಿಯಲ್ಲಿರಬೇಕು. ಕಟ್ಟಡಗಳು, ವಿದ್ಯುತ್ ತಂತಿಗಳಿಂದ ಅಪಾಯಕಾರಿ ಸನ್ನಿವೇಶ ಸೃಷ್ಟಿಯಾಗದಂತೆ ಮುನ್ನೆಚ್ಚರಿಕೆ ಸ್ಥಳೀಯರ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
Comments are closed.