Home News Gujarath: 13 ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿ ಗರ್ಭಿಣಿ- ಗರ್ಭಪಾತಕ್ಕೆ ಕೋರ್ಟ್ ಅನುಮತಿ !!

Gujarath: 13 ವರ್ಷದ ವಿದ್ಯಾರ್ಥಿಯಿಂದ ಶಿಕ್ಷಕಿ ಗರ್ಭಿಣಿ- ಗರ್ಭಪಾತಕ್ಕೆ ಕೋರ್ಟ್ ಅನುಮತಿ !!

Hindu neighbor gifts plot of land

Hindu neighbour gifts land to Muslim journalist

Gujarath: ಸೂರತ್‌ನ 23 ವರ್ಷದ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬಳು ತನ್ನ 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋಗಿ ಐದು ತಿಂಗಳ ಗರ್ಭಿಣಿಯಾಗಿ ಪತ್ತೆಯಾಗಿದ್ದಳು. ಈಗ ಈ ಶಿಕ್ಷಕಿ ಗರ್ಭಪಾತಕ್ಕಾಗಿ ಕೋರ್ಟ್ ಮಳೆ ಹೋಗಿದ್ದಳು. ಇದೀಗ ಈಕೆಯ ಗರ್ಭಪಾತಕ್ಕೆ ಕೋರ್ಟ್ ಅನುಮತಿ ನೀಡಿದೆ.

ಹೌದು, ಶಿಕ್ಷಕಿ 5ನೇ ತರಗತಿ ವಿದ್ಯಾರ್ಥಿಗೆ ಪಾಠ ಮಾಡುತ್ತಿದ್ದು ಕ್ರಮೇಣ, ಇಬ್ಬರ ನಡುವಿನ ಆತ್ಮೀಯತೆ ಬೆಳೆದು ಕೊನೆಗೆ ಅವರು ದೈಹಿಕ ಸಂಬಂಧವನ್ನು ಹೊಂದಿದ್ದರು. ಏಪ್ರಿಲ್ 24ರಂದು ಇಬ್ಬರೂ ಮನೆಯಿಂದ ಓಡಿಹೋಗಿದ್ದರು. ನಂತರ ಕುಟುಂಬವು ಪೊಲೀಸರಿಗೆ ದೂರು ನೀಡಿತು. ಬಾಲಕನ ಪೋಷಕರು ದೂರು ದಾಖಲಿಸಿದ ನಾಲ್ಕು ದಿನಗಳ ಹುಡುಕಾಟದ ನಂತರ ಗುಜರಾತ್-ರಾಜಸ್ಥಾನ ಗಡಿಯ ಬಳಿ ಇಬ್ಬರು ಪತ್ತೆಯಾಗಿದ್ದು, ಶಿಕ್ಷಕಿಯನ್ನು ಬಂಧಿಸಲಾಗಿತ್ತು.

ಬಳಿಕ ಪೊಲೀಸರ ವಿಚಾರಣೆ ವೇಳೆ, ಶಿಕ್ಷಕಿ ತಾನು ಐದು ತಿಂಗಳ ಗರ್ಭಿಣಿ ಎಂದು ಹೇಳಿದ್ದು, ತಾನು ಗರ್ಭ ಧರಿಸಲು 13 ವರ್ಷದ ವಿದ್ಯಾರ್ಥಿ ಕಾರಣನಾಗಿದ್ದಾನೆ. ಹೀಗಾಗಿ ಬಾಲಕನೊಂದಿಗೆ ಓಡಿಹೋಗಿ ಬೇರೆ ನಗರದಲ್ಲಿ ನೆಲೆಸಲು ಬಯಸುತ್ತಿರುವುದಾಗಿಯೂ ಹೇಳಿದ್ದಳು. ಅಪ್ರಾಪ್ತ ವಿದ್ಯಾರ್ಥಿಯ ಮೇಲೆನ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಈ ಶಿಕ್ಷಕಿಯನ್ನು ಬಂಧಿಸಲಾಗಿತ್ತು. ಇದೀಗ ಈಕೆ ಗರ್ಭಪಾತಕ್ಕಾಗಿ ಕೋರ್ಟು ಮರೆ ಹೋಗಿದ್ದಳು. ಆಕೆಯ ಮಾನಸಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.