Sonu nigam: ಕನ್ನಡಿಗರ ಅವಹೇಳನ ಪ್ರಕರಣ : ಸೋನು ನಿಗಮ್ ಅರ್ಜಿ ಮುಂದೂಡಿಕೆ!

Share the Article

Sonu nigam : ಕನ್ನಡಿಗರನ್ನು ಅವಹೇಳನ ಮಾಡಿರುವ ಆರೋಪದ ಮೇಲೆ ಗಾಯಕ ಸೋನು ನಿಗಮ್ (Sonu nigam) ಮೇಲೆ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಪ್ರಕರಣ ಸಂಬಂಧ ತನ್ನ ವಿರುದ್ಧ ದಾಖಲಿಸಿರುವ ಎಫ್‌ಐಆ‌ರ್ ಅನ್ನು ರದ್ದುಪಡಿಸಬೇಕೆಂದು ಕೋರಿ ಗಾಯಕ ಸೋನು ನಿಗಮ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಮೇ. 15 ಕ್ಕೆ ಮುಂದೂಡಿದೆ.

ಖಾಸಗಿ ಕಾಲೇಜೊಂದರಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸೋನು ನಿಗಮ್ ಕನ್ನಡದ ಹಾಡು ಹಾಡುವಂತೆ ಒತ್ತಾಯಿಸಿದವರನ್ನು ಗೂಂಡಾಗಳು ಎಂದು ಕರೆದಿದ್ದರು. ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಬಳಿಕ ಕನ್ನಡ ಸಿನಿಮಾ ಚಿತ್ರೋದ್ಯಮದಿಂದ ಸೋನು ನಿಗಮ್ ಗೆ ನಿಷೇಧ ಹೇರಲಾಗಿತ್ತು.

Comments are closed.