Home Crime 3ನೇ ಗಂಡ ಇರುವಾಗ 2ನೇ ಗಂಡನ ಜತೆ ಸೆಕೆಂಡ್ ಇನ್ನಿಂಗ್ಸ್ – ಪೊನ್ನಂಪೇಟೆ ಅಪ್ಡೇಟ್!

3ನೇ ಗಂಡ ಇರುವಾಗ 2ನೇ ಗಂಡನ ಜತೆ ಸೆಕೆಂಡ್ ಇನ್ನಿಂಗ್ಸ್ – ಪೊನ್ನಂಪೇಟೆ ಅಪ್ಡೇಟ್!

Crime

Hindu neighbor gifts plot of land

Hindu neighbour gifts land to Muslim journalist

Madikeri : ಕಳೆದ ಶುಕ್ರವಾರ ಕೊಡಗಿನ ಪೊನ್ನಂಪೇಟೆಯ ಬೇಗೂರು ಸಮೀಪದ ಬಾಳಂಗಾಡು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ ಪ್ರಕರಣ ನಡೆದಿದೆ. ತನ್ನ ಪತ್ನಿ ಎರಡನೇ ಪತಿಯೊಂದಿಗೆ ಮತ್ತೆ ಸಂಬಂಧ ಬೆಳೆಸಿದ್ದಾಳೆ ಎಂಬ ಸಿಟ್ಟಿನಿಂದ ಪತಿ ತನ್ನ ಪತ್ನಿ ಸೇರಿ ನಾಲ್ವರನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಭೀಕರ ಕೊಲೆ ನಡೆದ 9 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಕೇರಳದಲ್ಲಿ ಬಂಧಿಸಿದ್ದಾರೆ.

ಹತ್ಯೆಯಾದವರನ್ನು ಕರಿಯ (75) ಗೌರಿ (70) ನಾಗಿ (35) ಹಾಗೂ ಕಾವೇರಿ (7) ಎಂದು ಗುರುತಿಸಲಾಗಿದೆ. ಗಿರೀಶ್ (35) ಹತ್ಯೆಗೈದ ಆರೋಪಿ. ಕೊಡಗಿನ ಬೇಗೂರು ಗ್ರಾಮದ ಬಾಳಂಗಾಡು ಎಂಬಲ್ಲಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಬಾಳಂಗಾಡು ಎಂಬಲ್ಲಿ ಒಂಟಿ ಮನೆಯಲ್ಲಿ ಹತ್ಯೆಯಾದ ನಾಲ್ವರು ಸೇರಿದಂತೆ ಗಿರೀಶ್ ಕೂಡ ವಾಸವಾಗಿದ್ದ.

ಆರೋಪಿ ಗಿರೀಶ್ ನಾಗಿಯ ಮೂರನೇ ಗಂಡನಾಗಿದ್ದು, ಕಳೆದ ಒಂದು ವರ್ಷದಿಂದ ಒಟ್ಟಿಗೆ ಸಂಸಾರ ಮಾಡಿಕೊಂಡಿದ್ದರು. ಆದರೆ ನಾಗಿ ತನ್ನ ಎರಡನೇ ಪತಿಯೊಂದಿಗೆ ಮತ್ತೆ ಸಂಬಂಧ ಕುದುರಿಸಿ ಬೆಳೆಸಿದ್ದಾಳೆ ಎಂದು ಗಿರೀಶ್‌ಗೆ ಸಂಶಯ ಮೂಡಿತ್ತು. ಇದರಿಂದಾಗಿ ಆತ ಗುರುವಾರ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ನಾಲ್ವರನ್ನು ಕತ್ತಿಯಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದ.

ಮಾರನೇ ದಿನ ಶುಕ್ರವಾರ ಮದ್ಯಾಹ್ನ 1:30ರ ಸುಮಾರಿಗೆ ಪೊನ್ನಂಪೇಟೆ ಠಾಣೆಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾನ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗೆ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.