Paneer: ಪನ್ನೀರ್‌ ಪ್ರಿಯರಿಗೆ ಕಹಿ ಸುದ್ದಿ! ಆಹಾರ ಇಲಾಖೆ ಪರೀಕ್ಷೆಯಲ್ಲಿ ಬ್ಯಾಕ್ಟೀರಿಯಾ ಅಂಶ ಪತ್ತೆ!

Share the Article

Paneer: ಆಹಾರ ಇಲಖೆ ಪನ್ನೀರ್‌ ಸೇರಿ ಇತರೆ ಆಹಾರ ಉತ್ಪನ್ನಗಳ ಸ್ಯಾಂಪಲ್‌ ಪಡೆದು ಟೆಸ್ಟ್‌ಗೆ ಒಳಪಡಿಸಿತ್ತು. ಇದೀಗ ಅದರ ವರದಿ ಬಂದಿದ್ದು, ಪನ್ನೀರ್‌ನಲ್ಲಿ ಬ್ಯಾಕ್ಟೀರಿಯಾ ಅಂಶ ಇರುವುದು ದೃಢವಾಗಿದೆ. ಉಳಿದ ಸ್ಯಾಂಪಲ್‌ಗಳ ವರದಿಗಾಗಿ ಆಹಾರ ಇಲಾಖೆ ಕಾಯುತ್ತಿದೆ.

ಪನ್ನೀರ್‌ನಲ್ಲಿ ಅಸುರಕ್ಷಿತ ಅಂಶ ಇರುವ ಹಿನ್ನೆಲೆಯಲ್ಲಿ ಕಳೆದ ಹಲವು ದಿನಗಳ ಹಿಂದೆ ಬೆಂಗಳೂರು ಸೇರಿ ಹಲವು ಕಡೆ ಆಹಾರ ಇಲಾಖೆ ಪನ್ನೀರ್‌ ಸ್ಯಾಂಪಲ್‌ ಸಂಗ್ರಹ ಮಾಡಿತ್ತು. ಆಹಾರ ಗುಣಮಟ್ಟ ಇಲಾಖೆಯಿಂದ ಪನ್ನೀರ್‌ ಸ್ಯಾಂಪಲ್‌ ಟೆಸ್ಟ್‌ ಮಾಡಲಾಗಿದ್ದು, ಲ್ಯಾಬ್‌ ರಿಪೋರ್ಟ್‌ ಬಂದಿದೆ. ವರದಿಯಲ್ಲಿ ಅಸುರಕ್ಷಿತ ಅಂಶ ಇರುವುದು ಪತ್ತೆ ಆಗಿದೆ.

Comments are closed.