Nandini: ನಂದಿನಿ ಹಾಲಿನ ದರ 5 ರೂ ಏರಿಕೆ ಕುರಿತು ಬಿಗ್ ಅಪ್ಡೇಟ್!!

Share the Article

Nandini: ಬಜೆಟ್ ಮಂಡನೆಯಾದ ಬಳಿಕ ರಾಜ್ಯದಲ್ಲಿ ನಂದಿನಿ(Nandini) ಹಾಲಿನ ದರವನ್ನು ಐದು ಏರಿಕೆ ಮಾಡಲಾಗುವುದು ಎಂದು ಕೆಎಂಎಫ್(KMF) ಪ್ರಸ್ಥಾಪಿಸಿತ್ತು. ಈ ಕುರಿತಾಗಿ ಸರ್ಕಾರಕ್ಕೂ ಕೂಡ ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದೀಗ ಈ ವಿಚಾರವಾಗಿ ಇಂದು ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ.

ಹೌದು, ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದ್ದು, ಹಾಲು ಒಕ್ಕೂಟಗಳ ಜೊತೆ ದರ ಏರಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಮೇವು, ಆಹಾರ, ಕೂಲಿ ಖರ್ಚುಗಳು ಹೆಚ್ಚಾಗಿರುವುದರಿಂದ ಹಾಲಿನ ದರ ಏರಿಕೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.

ಸರ್ಕಾರ ಇಂದು ಈ ಬಗ್ಗೆ ತೀರ್ಮಾನಿಸಲಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಕೂಡಾ ಹಾಲಿನ ದರ ಏರಿಕೆ ಮಾಡುವುದನ್ನು ಸಮರ್ಥಿಸಿಕೊಂಡಿದ್ದರು. ಹೀಗಾಗಿ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಬರೆ ಬೀಳುವುದು ಗ್ಯಾರಂಟಿ.

Comments are closed.