Kapu: ಕಾಪು: ಮದ್ವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ: ದೂರು ದಾಖಲು

Share the Article

Kapu: ಫೇಸ್ಬುಕ್ ಮೂಲಕ ಪರಿಚಯವಾದ ಯುವತಿಯನ್ನು ಮದ್ವೆಯಾಗೋದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ವಿವಾಹವಾಗಲು ನಿರಾಕರಿಸಿದ ಘಟನೆ ಉಡುಪಿಯ ಕಾಪುವಿನಲ್ಲಿ( Kapu) ನಡೆದಿದೆ.

ಈ ಬಗ್ಗೆ ಕಾರ್ಕಳ ಕುಕ್ಕುಂದೂರು ನಿವಾಸಿ ಸುಕೇಶ್ ಪುತ್ರನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಪು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಸಂತ್ರಸ್ತೆಗೆ ಈತ ಏಳು ವರ್ಷದಿಂದಲೇ ಪರಿಚಯವಿದ್ದ.
ಆತ ಮದ್ವೆಯ ನೆಪ ಹೇಳಿ ವಿವಿಧ ಲಾಡ್ಜ್ ಗಳಿಗೆ ಕರೆದುಕೊಂಡು ಹೋಗಿ ಯುವತಿಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದಾನೆ‌. ನಂತರ ವಿದೇಶಕ್ಕೆ ಹೋಗಿದ್ದ. ಮರಳಿ ಬಂದು ಮತ್ತೆ ಅದೇ ಕೃತ್ಯವನ್ನು ಎಸಗಿದ್ದ. ಈ ಬಗ್ಗೆ ಯುವತಿ ಕೇಸು ದಾಖಲಿಸಿದ್ದಾಳೆ.

Comments are closed.