Viral Video : ಕೈಯಲ್ಲಿ ಏಕೆ -47 ಗನ್ ಹಿಡಿದು ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ ಹಾಕಿದ ಪುಟ್ಟ ಬಾಲಕಿ!! ಅಚ್ಚರಿ ವಿಡಿಯೋ ವೈರಲ್

Viral Video : ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಗ್ರರಿಂದ, ಕೆಲವು ಆಗಂತುಕರಿಂದ ಬೆದರಿಕೆ ಬಂದಿರುವಂತಹ ಕೆಲವು ವಿಚಾರಗಳನ್ನು ನಾವು ತಿಳಿದಿದ್ದೇವೆ. ಆದರೆ ಈಗ ಅಚ್ಚರಿ ಎಂಬಂತೆ ಪುಟ್ಟ ಬಾಲಕಿ ಒಬ್ಬಳು ಕೈಯಲ್ಲಿ ಏಕೆ ಫಾರ್ಟಿ ಸೆವೆನ್ ಗನ್ ಹಿಡಿದು ಪ್ರಧಾನಿ ಮೋದಿಯವರಿಗೆ ಕೊಲೆ ಬೆದರಿಕೆ ಹಾಕಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ವೈರಲ್ ವಿಡಿಯೋದಲ್ಲಿ ಹುಡುಗಿ ಅಸಾಲ್ಟ್ ರೈಫಲ್ ಅನ್ನು ಹಿಡಿದುಕೊಂಡು “ಮಿಸ್ಟರ್ ಮೋದಿ, ನೀವು ಏನೇ ಆಗಿರಲಿ, ನೀವು ನಮ್ಮ ದೇಶವನ್ನು ಮತ್ತೊಮ್ಮೆ ಕೊಂದರೆ, ತಾಯಿ ಮತ್ತು ತಂದೆ ಮತ್ತು ಮಕ್ಕಳನ್ನು ಕೊಂದರೆ, ನಾನು ನಿಮ್ಮ ಮುಖಕ್ಕೆ ಗುಂಡು ಹೊಡೆಯುತ್ತೇನೆ ಮತ್ತು ನೀವು ನೋಡುತ್ತೀರಿ… ನನ್ನ ಬಳಿ ಸಾಕಷ್ಟು ಗುಂಡುಗಳು, 50 ಗುಂಡುಗಳಿವೆ, ಮತ್ತು ನಾನು ನಿಮ್ಮನ್ನು ಎರಡು ಹೊಡೆತಗಳಲ್ಲಿ ಕೊಲ್ಲುತ್ತೇನೆ. ನೀವು ಎಂದಿಗೂ ಜೀವಂತವಾಗಿರಲು ಸಾಧ್ಯವಿಲ್ಲ, ಮತ್ತು ವೈದ್ಯರು ನಿಮ್ಮನ್ನು ಕಾಪಾಡುವುದಿಲ್ಲ – ನೀವು ನೆಲದ ಮೇಲೆ ಶಾಶ್ವತವಾಗಿ ಸಾಯುತ್ತೀರಿ.” ಎಂದು ಬಾಲಕಿ ವಿಡಿಯೋದಲ್ಲಿ ಹೇಳಿದ್ದಾಳೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅನೇಕ ಮಂದಿ ಕಳವಳವನ್ನು ವ್ಯಕ್ತಪಡಿಸಿದ್ದಾರೆ.

Comments are closed.