Virginity: ಕನ್ಯತ್ವ ಆನ್ಲೈನ್ನಲ್ಲಿ ಹರಾಜಿಗಿಟ್ಟ ವಿದ್ಯಾರ್ಥಿನಿಗೆ ಸಿಕ್ಕಿದ ಹಣ ಎಷ್ಟು ನೋಡಿ!

Virginity: ವಿದ್ಯಾರ್ಥಿನಿಯೊಬ್ಬಳು ತನ್ನ ಕನ್ಯತ್ವವನ್ನು (Virginity) ಹರಾಜಿಗೇ ಇಟ್ಟುಬಿಟ್ಟಿದ್ದಾಳೆ, ಅದೂ ಆನ್ಲೈನ್ನಲ್ಲಿ. ಅದಕ್ಕೆ ಆಕೆಗೆ ತಕ್ಕ ಪ್ರತಿಫಲವೂ ಸಿಕ್ಕಿದೆ. ಕುಬೇರನೊಬ್ಬ ಆಕೆಯ ಕನ್ಯತ್ವವನ್ನು 1.7 ಮಿಲಿಯ ಡಾಲರ್ (ಸುಮಾರು 18 ಕೋಟಿ ರೂಪಾಯಿ) ಕೊಟ್ಟು ಖರೀದಿಸಿದ್ದಾನೆ!

ಈಕೆ ಇನ್ನೂ ವಿದ್ಯಾರ್ಥಿನಿ, 22 ವರ್ಷ. ಮ್ಯಾಂಚೆಸ್ಟರ್ನ ಕಾಲೇಜು ವಿದ್ಯಾರ್ಥಿನಿ. ಹೆಸರು ಲಾರಾ. ಈಕೆ ತನ್ನ ಕನ್ಯತ್ವವನ್ನು ಆನ್ಲೈನ್ನಲ್ಲಿ ಹರಾಜಿಡುವ ಮೂಲಕ ವಿಶ್ವದಾದ್ಯಂತ ಸುದ್ದಿಯಾದಳು. ಅದೂ ಒಂದು ಎಸ್ಕಾರ್ಟ್ ಏಜೆನ್ಸಿಯ ವೇದಿಕೆಯಲ್ಲಿ. ಎಸ್ಕಾರ್ಟ್ ಏಜೆನ್ಸಿ ಎಂದರೆ ವೇಶ್ಯಾವಾಟಿಕೆಗೆ ಸಭ್ಯ ಹೆಸರು ಅಷ್ಟೆ! ಈ ಹರಾಜಿನಲ್ಲಿ ರಾಜಕಾರಣಿಗಳು, ವ್ಯಾಪಾರ ಉದ್ಯಮಿಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಪ್ರಭಾವಿ ವ್ಯಕ್ತಿಗಳು ಆಸಕ್ತಿ ವಹಿಸಿದದ್ದು, ಕೊನೆಯಲ್ಲಿ ಈಕೆಯ ಬಿಡ್ ಅನ್ನು ಗೆದ್ದುಕೊಂಡವನು ಒಬ್ಬ ಹಾಲಿವುಡ್ ತಾರೆಯಂತೆ!
ಈ ಹರಾಜು ಆನ್ಲೈನ್ನಲ್ಲಿ ವ್ಯಾಪಕ ಗಮನ ಸೆಳೆದಿದೆ. ಹರಾಜು ಅಂತಿಮಗೊಳಿಸಿದ ನಂತರ, ಈಕೆ ಖರೀದಿದಾರರ ಸಮ್ಮುಖದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿ ತನ್ನ ಕನ್ಯತ್ವವನ್ನು ದೃಢಪಡಿಸಿದಳು!
ಕೊನೆಗೂ ಹಾಲಿವುಡ್ ನಟನಿಗೆ ತನ್ನ ಕನ್ಯತ್ವವನ್ನು ಮಾರಾಟ ಮಾಡಿದ ನಂತರ ಲಾರಾ ತನ್ನ ವಿವಾದಾತ್ಮಕ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗಪಡಿಸಿದಳು. ಇದು ಆಕೆಯ ಪಾಲಿಗೆ ಆರ್ಥಿಕವಾಗಿ ಲಾಭ ಪಡೆಯುವ ಅವಕಾಶವಂತೆ. ಇದು ಆಕೆಯ ಜೀವನವನ್ನು ಬದಲಾಯಿಸುವ ಮೊತ್ತ. ಸದ್ಯ ಪ್ರಸಿದ್ಧ ನಟನೊಂದಿಗೆ ಸೆಕ್ಸ್ನ ಆ ಕ್ಷಣವನ್ನು ಆಕೆ ಈಗ ಹಂಚಿಕೊಳ್ಳಬೇಕಿದೆ.
Comments are closed.