Uttarpradesh: ಮೊಬೈಲ್‌ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದ ವಿದ್ಯಾರ್ಥಿ ಸಾವು!

Share the Article

Uttarpradesh: ವಿದ್ಯಾರ್ಥಿಯೋರ್ವ ಮೊಬೈಲ್‌ನಲ್ಲಿ ಮಾತನಾಡುತ್ತಾ ಬಾವಿಗೆ ಬಿದ್ದು ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ವಿದ್ಯಾರ್ಥಿ ರಾಹುಲ್‌ ಕುಮಾರ್‌ನನ್ನು ಪತ್ತೆ ಮಾಡಿದ್ದರು. ಆ ಸಂದರ್ಭದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಿದರು. ಹತ್ರಾಸ್‌ನ ನಾಗ್ಲಾ ಪ್ರದೇಶದ ಈ ಯುವಕ ರಾತ್ರಿ ಸಮಯದಲ್ಲಿ ಜಮೀನಿಗೆ ಟ್ರ್ಯಾಕ್ಟರ್‌ ಟ್ರಾಲಿಯಲ್ಲಿ ತುಂಬಿಸಲಾಗುತ್ತಿದ್ದ ಆಲೂಗಡ್ಡೆಯನ್ನು ನೋಡಿಕೊಳ್ಳಲು ಹೋಗಿದ್ದ. ಟ್ರ್ಯಾಕ್ಟರ್‌ ಕೆಟ್ಟು ಹೋಗಿದ್ದರಿಂದ ಆತ ತನ್ನ ಚಿಕ್ಕಪ್ಪನಿಗೆ ಕರೆ ಮಾಡಲು ಹೋಗಿ ಕಾಲು ಜಾರಿ ಹಳೆಯ ಬಾವಿಗೆ ಬಿದ್ದು ಈ ಅವಘಡ ಸಂಭವಿಸಿದೆ.

Comments are closed.