Home Crime Bangalore: ಲೈಂಗಿಕ ಸಂಪರ್ಕಕ್ಕೆ ಸಹಕರಿಸದವಳ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್‌

Bangalore: ಲೈಂಗಿಕ ಸಂಪರ್ಕಕ್ಕೆ ಸಹಕರಿಸದವಳ ಹತ್ಯೆಗೈದವನಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ಕೋರ್ಟ್‌

Crime News Bangalore

Hindu neighbor gifts plot of land

Hindu neighbour gifts land to Muslim journalist

Court: ಲೈಂಗಿಕ ಸಂಪರ್ಕಕ್ಕೆ ಸಹಕರಿಸದಿದ್ದಕ್ಕೆ ಚಾಕುವಿನಿಂದ ಚುಚ್ಚಿ ಮಹಿಳೆಯನ್ನು ಸಾಯಿಸಿದ್ದಲ್ಲದೆ ಆಕೆಯ ನಾಲ್ಕು ವರ್ಷದ ಮಗುವನ್ನು ಕತ್ತು ಸೀಳಿ ಕೊಂದ ಅಪರಾಧಿಗೆ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಿದೆ.

ಹೊಸಪೇಟೆ ಮೂಲದ ಪ್ರಶಾಂತ್‌ ದೋಷಿ ಎಂದು ಪರಿಗಣಿಸಿದ ನಗರ 51ನೇ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌, ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದ್ದಾರೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ಠಾಣಾ ವ್ಯಾಪ್ತಿಯ ಅಪಾರ್ಟ್‌ಮೆಂಟ್‌ನಲ್ಲಿ ಪತಿ ಹಾಗೂ ನಾಲ್ಕು ವರ್ಷದ ಹೆಣ್ಣುಮಗುವಿನ ಜೊತೆ ವಾಸ ಮಾಡುತ್ತಿದ್ದ ಯಮುನಾ ಆಯುರ್ವೇದ ಔಷಧ ಮಾರಾಟ ಮಾಡುತ್ತಿದ್ದರು. ಆನ್‌ಲೈನ್‌ ಮೂಲಕ ಅಪರಾಧಿ ಪ್ರಶಾಂತ್‌ ಪರಿಚಯವಾಗಿತ್ತು. ನಂತರ ಇಬ್ಬರೂ ತಮ್ಮ ಮೊಬೈಲ್‌ ನಂಬರ್‌ ಎಕ್ಸ್‌ಚೇಂಜ್‌ ಮಾಡಿ ಮಾತನಾಡುತ್ತಿದ್ದರು.

2021 ರ ಅ.19 ರಂದು ಔಷಧಿ ಖರೀದಿಸುವ ನೆಪ ಮಾಡಿ ಹೊಸಪೇಟೆಯಿಂದ ರೈಲಿನ ಮೂಲಕ ನಗರಕ್ಕೆ ಬಂದಿದ್ದ ಪ್ರಶಾಂತ್‌ ಆಕೆಯೊಂದಿಗೆ ಮಾತನಾಡುತ್ತಾ ತನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸು ಎಂದು ಒತ್ತಾಯ ಮಾಡಿದ್ದ. ಇದಕ್ಕೆ ಮಹಿಳೆ ನಿರಾಕರಿಸಿದ್ದಳು. ಆಗ ಆಕೆಯನ್ನು ಕೊಲೆ ಮಾಡಿದ್ದ.

ಮೃತ ಮಹಿಳೆಯ ಪತಿ ನೀಡಿದ ದೂರನ್ನು ಆಧರಿಸಿ ಬೇಗೂರು ಠಾಣೆ ಇನ್ಸ್‌ಪೆಕ್ಟರ್‌ ಆಗಿದ್ದ ಶಿವಕುಮಾರ್‌ ಬಿ.ಮುಚ್ಚಂಡಿ ಅವರು ಪ್ರಕರಣ ದಾಖಲು ಮಾಡಿದ್ದರು. ನಂತರ ಆರೋಪಿಯನ್ನು ಬಂಧನ ಮಾಡಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.