Bantwala: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ; ಮಹಿಳೆ ಸಾವು

Bantwala: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸಾವಿಗೀಡಾದ ಘಟನೆ ಬಿ.ಸಿ.ರೋಡಿನ ಎಲ್ಐಸಿ ಕಚೇರಿ ಮುಂಭಾಗ ಸೋಮವಾರ (ಫೆ.25) ನಡೆದಿದೆ.

ಸರಸ್ವತಿ (50) ಮೃತ ಮಹಿಳೆ
ಎಲ್ಐಸಿ ಕಚೇರಿಯಲ್ಲಿ ಕೆಲಸ ಮುಗಿಸಿ ಉಪ್ಪಿನಂಗಡಿಗೆ ತೆರಳಲೆಂದು ರಸ್ತೆ ದಾಟುತ್ತಿದ್ದ ಸರಸ್ವತಿ ಅವರಿಗೆ ಸ್ಕೂಟರ್ ಡಿಕ್ಕಿ ಹೊಡೆದಿದೆ. ತಲೆಗೆ ಪೆಟ್ಟು ಬಿದ್ದಿದ್ದು, ಕೂಡಲೇ ಅವರನ್ನು ತುಂಬೆಯಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಎಲ್ಐಸಿಯಲ್ಲಿ ಪತಿ ಏಜೆಂಟ್ ಆಗಿದ್ದು, ಕಚೇರಿಯಲ್ಲಿ ಕಾರ್ಯಕ್ರಮವಿದ್ದ ಕಾರಣ ಬಂದಿದ್ದರು ಎನ್ನಲಾಗಿದೆ. ಪಾಣೆಮಂಗಳೂರಿನ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.