Kasaragodu: ಕಾಸರಗೋಡು: ಕಾರಿನಲ್ಲಿ ಮಾದಕ ವಸ್ತು ಸಾಗಾಟ; ನಾಲ್ವರು ಆರೋಪಿಗಳು ಅರೆಸ್ಟ್!

Share the Article

Kasaragodu: ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಮಾದಕ ವಸ್ತು ಸಹಿತ ನಾಲ್ವರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿಯಿಂದ 21.5 ಗ್ರಾಂ ಎಂಡಿಎಂಎ ಮಾದಕ ವಸ್ತು ವನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿಗಳನ್ನು ಉಪ್ಪಳ ಕೋಡಿ ಬೈಲ್ ನ ಇಬ್ರಾಹಿಂ ಸಿದ್ದೀಕ್(33), ಉಪ್ಪಳ ಪ್ರತಾಪ ನಗರದ ಮೂಸಾ ಶಫೀಕ್ (30), ಆಡ್ಕ ತ್ತ ಬೈಲ್ ನ ಮುಹಮ್ಮದ್ ಸಾಲಿ (46) ಮತ್ತು ಮುಹಮ್ಮದ್ ಸವಾದ್ (20) ಎಂದು ಗುರುತಿಸಲಾಗಿದೆ.

ಕುಂಬಳೆ ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಚೇವಾ‌ರ್ ಎಂಬಲ್ಲಿ ಕಾರು ತಡೆದ ಪೊಲೀಸರು ತಪಾಸಣೆ ನಡೆಸಿದಾಗ ಇವರ ಬಳಿಯಿಂದ ಮಾದಕ ವಸ್ತು ಪತ್ತೆಯಾಗಿದೆ.

Comments are closed.