ಪುತ್ತೂರು : ಯಾದವ ಸಭಾ ಜಿಲ್ಲಾ ಸಮ್ಮೇಳನ 2025 “ಪ್ರಚಾರ ಪತ್ರ ಅನಾವರಣ”

Share the Article

Putturu: ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಹಾಗೂ ಸುಳ್ಯ ಮಂಗಳೂರು ಬಂಟ್ವಾಳ ಯಾದವ ಸಭಾ ತಾಲೂಕು ಸಮಿತಿ ಸಹಯೋಗದೊಂದಿಗೆ ಪುತ್ತೂರು ಯಾದವ ಸಭಾ ತಾಲೂಕು ಸಮಿತಿ ಆಶ್ರಯದಲ್ಲಿ ಏಪ್ರಿಲ್ 20ರಂದು ಪಾಣಾಜೆ ರಣಮಂಗಲ ಸಭಾಭವನದಲ್ಲಿ ನಡೆಯುವ “ಜಿಲ್ಲಾ ಯಾದವ ಸಮಾವೇಶ 2025 ” ಹಾಗೂ ಏಪ್ರಿಲ್ 6ರಂದು ನಡೆಯುವ ಜಿಲ್ಲಾ ಕ್ರೀಡಾಕೂಟದ ಪ್ರಚಾರ ಪತ್ರ ಅನಾವರಣ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಪ್ರಚಾರ ಪತ್ರವನ್ನು ಅನಾವರಣಗೊಳಿಸಿದ ಆದಿಶಕ್ತಿ ಪಾರ್ಸೆಲ್ ಸರ್ವೀಸ್ ಮಾಲಕ ರಮೇಶ್ ಎಂ ಎಸ್ ರವರು ಮಾತನಾಡಿ, ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ಪ್ರಚಾರ ಪತ್ರ ಅನಾವರಣ ಮಾಡಲು ಅವಕಾಶ ಮಾಡಿ ಕೊಟ್ಟ ನನ್ನ ಯಾದವ ಸಮುದಾಯಕ್ಕೆ ಕೃತಜ್ಞತೆಗಳು ಇದು ನನ್ನ ಪಾಲಿನ ಭಾಗ್ಯ ಹಾಗೂ ನಾನು ನಿರಂತರವಾಗಿ ನಿಮ್ಮ ಜೊತೆಗಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಯಾದವ ಸಭಾ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಎ.ಕೆ ಮಣಿಯಾಣಿ ಬೆಳ್ಳಾರೆ, ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಸುಭಾಶ್ ರೈ ಬೆಳ್ಳಿಪ್ಪಾಡಿ, ಈಶ್ವರ ನಾಯ್ಕ ಹಾಗೂ ಯಾದವ ಸಭಾ ಕೇಂದ್ರ ಸಮಿತಿಯ ಪದಾಧಿಕಾರಿಗಳು ವಿವಿಧ ತಾಲೂಕು ಯಾದವ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಸಮುದಾಯದ ಬಾಂಧವರು ಉಪಸ್ಥಿತರಿದ್ದರು.

ತಾಲೂಕು ಯಾದವ ಸಭಾದ ಅಧ್ಯಕ್ಷ ಪ್ರಸಾದ್ ಪಾಣಾಜೆ ಎಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Comments are closed.