Manipala : ಮಣಿಪಾಲದ ‘ಅಜ್ಜ-ಅಜ್ಜಿ ಮೆಸ್’ ಗೆ ‘ರಿಲಯನ್ಸ್ ಡಿಜಿಟಲ್’ ಕಡೆಯಿಂದ ಹಲವು ಕೊಡುಗೆ – ಈ ಎಲ್ಲವನ್ನು ಉಚಿತವಾಗಿ ನೀಡಿದ ಸಂಸ್ಥೆ

Manipala: ಸೋಶಿಯಲ್ ಮೀಡಿಯಾವನ್ನು ಬಳಸುವ ಹೆಚ್ಚಿನವರಿಗೆ ಉಡುಪಿಯ ಮಣಿಪಾಲ(Manipala)ದಲ್ಲಿರುವ ‘ಅಜ್ಜ ಅಜ್ಜಿ’ ಮೆಸ್ ಬಗ್ಗೆ ತಿಳಿದಿರುತ್ತದೆ. ಯಾಕೆಂದ್ರೆ ಕರಾವಳಿ ಭಾಗಕ್ಕೆ ಟ್ರಿಪ್ ಹೋಗುವರು ಈ ಒಂದು ‘ಅಜ್ಜ ಅಜ್ಜಿಯ ಮೆಸ್ಸ’ನ್ನು ಯಾವುದೇ ಕಾರಣಕ್ಕೂ ಮಿಸ್ ಮಾಡುವುದಿಲ್ಲ. ಅಲ್ಲಿಗೆ ಹೋಗಿ ಗೋಪಾಲಕೃಷ್ಣ ಪ್ರಭು ಹಾಗೂ ವಸಂತಿಪ್ರಭು ಎಂಬ ವೃದ್ಧ ದಂಪತಿಗಳ ಕೈ ರುಚಿಯನ್ನು ಸವಿದು, ಅವರೇನಾದರೂ ಬ್ಲಾಗರ್ ಸಣ್ಣಪುಟ್ಟ ವಿಡಿಯೋಗಳನ್ನು ಮಾಡಿ ಮತ್ತೆ ಮುಂದುವರೆಯುತ್ತಾರೆ. ಒಟ್ಟಿನಲ್ಲಿ ಮಣಿಪಾಲದ ಅಜ್ಜ-ಅಜ್ಜಿ ಮೆಸ್ ಕರ್ನಾಟಕದಾತ್ಯಂತ ಈಗ ಫೇಮಸ್ ಆಗಿದೆ. ಈ ಬೆನ್ನಲ್ಲೇ ಈ ವೃದ್ಧ ದಂಪತಿಗಳಿಗೆ ರಿಲಯನ್ಸ್ ಗುಡ್ ನ್ಯೂಸ್ ನೀಡಿದೆ. ಅಷ್ಟೇ ಅಲ್ಲ ಭಾರಿ ದೊಡ್ಡ ದೊಡ್ಡ ಗಿಫ್ಟ್ ಗಳನ್ನು ಕೂಡ ನೀಡಿದೆ.

 

ಯಸ್.. ಕನಸುಗಳಿಗೆ ರೆಕ್ಕೆ ಕಟ್ಟುವ ಉದ್ದೇಶದಿಂದ ರಿಲಯನ್ಸ್ ಡಿಜಿಟಲ್ ನಿಂದ “ಹ್ಯಾಪಿನೆಸ್ ಪ್ರಾಜೆಕ್ಟ್” ಶುರು ಮಾಡಲಾಗಿದೆ. ಅದರ ಭಾಗವಾಗಿ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಅಜ್ಜ- ಅಜ್ಜಿ ಊಟ ಎಂಬ ಹೆಸರಿನ ಮೆಸ್ ಗೆ ಟೆಕ್ನಾಲಜಿಯ ನೆರವನ್ನು ನೀಡಲಾಗಿದೆ. ಇದಕ್ಕಾಗಿ ಕಾರ್ಯಕ್ರಮದ ಮುಖ್ಯ ನಿರೂಪಕಿ ಫರಾಹ್ ಖಾನ್ ಹಾಗೂ ಸಹ ನಿರೂಪಕರಾದ ಸಂಜೋತ್ ಕೀರ್ ಕರ್ನಾಟಕದಲ್ಲಿನ ಮಣಿಪಾಲಕ್ಕೆ ಬಂದು ಈ ಅಜ್ಜ- ಅಜ್ಜಿ ಊಟದ ಮೆಸ್ ಗೆ ಅಗತ್ಯ ಇರುವಂಥದ್ದನ್ನು ತಲುಪಿಸಿದ್ದಾರೆ.

ಅಂದಹಾಗೆ ತಮ್ಮ ಹೋಟೆಲಿಗೆ ಬಂದ ಎಲ್ಲಾ ಗ್ರಾಹಕರಿಗೂ ಊಟದೊಂದಿಗೆ ಪ್ರೀತಿಯನ್ನು ಉಣಬಡಿಸುವ ಈ ದಂಪತಿ ಪ್ರತಿ ದಿನ ತರಕಾರಿಗಳು ತರುವುದಕ್ಕೆ ಅಂತಲೇ ಆಟೋದಲ್ಲಿ ಕೆಲವು ಕಿಲೋಮೀಟರ್ ಹೋಗಿಬರಬೇಕಿತ್ತು. ಅದೇ ರೀತಿ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಅದರ ಹೊಗೆಯಿಂದಲೂ ಕಣ್ಣಿನ ಉರಿ ಮೊದಲಾದ ಸಮಸ್ಯೆಗಳು ಇದ್ದವು. ಇದೀಗ ರಿಲಯನ್ಸ್ ಡಿಜಿಟಲ್ ನವರ “ಹ್ಯಾಪಿನೆಸ್ ಪ್ರಾಜೆಕ್ಟ್” ಅಡಿಯಲ್ಲಿ ಅಜ್ಜ- ಅಜ್ಜಿ ಮೆಸ್ ಗೆ ನಾಲ್ಕು ಬರ್ನರ್ ಇರುವ ಗ್ಯಾಸ್ ಸ್ಟೌ, ರೆಫ್ರಿಜರೇಟರ್, ಅನ್ನದ ಕುಕ್ಕರ್, ಮಿಕ್ಸರ್ ಗ್ರೈಂಡರ್, ಮೈಕ್ರೋವೇವ್ ಹಾಗೂ ಸ್ಮಾರ್ಟ್ ಫೋನ್ ಗಳನ್ನು ಸಹ ಉಚಿತವಾಗಿ ನೀಡಲಾಗಿದೆ. ಈ ಕುರಿತು ವೃದ್ಧ ದಂಪತಿ ತುಂಬಾನೇ ಸಂತೋಷಪಟ್ಟಿದ್ದಾರೆ. ಅವರ ಸಂತೋಷವನ್ನು ಕಂಡು ರಿಲಯನ್ಸ್ ಸಂಸ್ಥೆ ಆನಂದತುಂದಿಲವಾಗಿದೆ.

ಈ ವೃದ್ಧ ದಂಪತಿಗಳು ನಡೆಸುತ್ತಿರುವ ಊಟದ ಮನೆಯ ಹೆಸರು, ಹೋಟೆಲ್ ಗಣೇಶ್ ಪ್ರಸಾದ್. ಸ್ಥಳೀಯರು ಇದನ್ನು ಪ್ರೀತಿಯಿಂದ ‘ಅಜ್ಜ ಅಜ್ಜಿ ಮನೆ’ ಎಂದು ಕರೆಯುತ್ತಾರೆ. ಈ ಹೊಟೇಲ್ ಮಣಿಪಾಲದ ರಾಜ್‍ಗೋಪಾಲ್ ನಗರ ರಸ್ತೆಯಲ್ಲಿದೆ. ಮಾಹಿತಿ ಪ್ರಕಾರ 1951 ರಿಂದ ಈ ದಂಪತಿ , ಹೋಟೆಲ್ ಗಣೇಶ್ ಪ್ರಸಾದ್ ಅನ್ನು ನಡೆಸಿಕೊಂಡು ಬರುತ್ತಿದ್ದಾರಂತೆ. ನಿತ್ಯವೂ ಮಧ್ಯಾಹ್ನ 12 ರಿಂದ 3 ಗಂಟೆಯ ವರೆಗೆ ಹೋಟೇಲ್ ಗಣೇಶ್ ಪ್ರಸಾದ್‍ನಲ್ಲಿ ಊಟ ಲಭ್ಯವಿರುತ್ತದೆ. ನೀವಲ್ಲಿ ಹೊಟ್ಟೆ ತೃಪ್ತಿ ಆಗುವಷ್ಟು ಊಟವನ್ನು ಸವಿಯಬಹುದು. ಅದಕ್ಕಾಗಿ ನೀವು ಪಾವತಿಸಬೇಕಾದ ದುಡ್ಡು ಕೇವಲ 50 ರೂಪಾಯಿ ಮಾತ್ರ!!

Leave A Reply

Your email address will not be published.