Uttar Pradesh: ಲವ್ ಜಿಹಾದ್ – ಹಲವು ಬಾರಿ ಅತ್ಯಾಚಾರ, ಗರ್ಭಪಾತ !! ಮುಸ್ಲಿಂ ಯುವಕನ ಕಾಟಕ್ಕೆ ಹಿಂದೂ ಯುವತಿ ಆತ್ಮಹತ್ಯೆ !!

Share the Article

Uttar Pradesh: ಉತ್ತರ ಪ್ರದೇಶದಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬಂದಿದ್ದು, ಹಿಂದೂ ಯುವತಿ ಒಬ್ಬಳು ಮುಸ್ಲಿಂ ಯುವಕನ ಮೊಸದ ಬಲೆಗೆ ಬಿದ್ದು, ಬೇಸತ್ತು ಕೊನೆಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಹೌದು, ಉತ್ತರ ಪ್ರದೇಶದ(Uttar Pardesh)ಗಾಜಿಯಾಬಾದ್ ಜಿಲ್ಲೆಯಲ್ಲಿ ಲವ್ ಜಿಹಾದ್’ ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕವಿನಗರದ ಫರಾಜ್ ಅತ್ತಾರ ಎಂಬ ಮುಸ್ಲಿಂ ಯುವಕನು ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯನ್ನು ಬಲವಂತವಾಗಿ ಮತಾಂತರಿಸಿದ್ದಾನೆ. ಫರಾಜ್ ಆಕೆಯಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿ ವಂಚಿಸಿದ್ದನು. ಅವನು ಯುವತಿಗೆ ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಕಿರುಕುಳ ನೀಡಿದ್ದನು. ಇದೆಲ್ಲದರಿಂದ ಬೇಸತ್ತ ಯುವತಿ ಕೊನೆಗೆ ತನ್ನ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಯುವತಿಯ ತಂದೆ ಕೋಟ್ಯಾಧಿಪತಿಯಾಗಿದ್ದು ಅವರ ಆಸ್ತಿಯೆಲ್ಲ ಈ ಯುವತಿಯ ಹೆಸರಿನಲ್ಲಿತ್ತು. ಈ ಆಸ್ತಿಯನ್ನು ದೋಚುವ ಸಲುವಾಗಿ ಫರಾಜ್ ಈ ಹಿಂದೂ ಯುವತಿಯನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿದ್ದನು. ನಾನು ಅವಿವಾಹಿತನೆಂದು ಹೇಳಿ ಆಕೆಗೆ ಮದುವೆಯ ಭರವಸೆ ನೀಡಿದ್ದನು. ಫರಾಜ್ ಯುವತಿಯ ಜೊತೆ ದೈಹಿಕ ಸಂಬAಧ ಹೊಂದಿದ್ದನು. ಅನೇಕ ಬಾರಿ ಆಕೆಗೆ ಗರ್ಭಪಾತ ಮಾಡಿಸಿದ್ದನು.

ಅಲ್ಲದೆ ಆಸ್ತಿಯೆಲ್ಲ ನನ್ನ ಹೆಸರಿಗೆ ಬಂದ ನಂತರವೇ ಮದುವೆಯಾಗುತ್ತೇನೆ ಎಂದು ಡಿಸೆಂಬರ್ 10ರಂದು ಆ ಹಿಂದೂ ಯುವತಿಗೆ ಷರತ್ತು ಹಾಕಿದ್ದನು. ಇದರಿಂದ ಬೇಸತ್ತ ಯುವತಿ ಡಿಸೆಂಬರ್ 11ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಧ್ಯ ಈ ಪ್ರಕರಣದಲ್ಲಿ ಮೃತ ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಫರಾಜ್ ಅತ್ತಾರ ಹಾಗೂ ಆತನ ಸಂಬಂಧಿಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave A Reply