Home News D K Shivakumar : ಎಸ್ ಎಮ್ ಕೃಷ್ಣ ಅವರ ಸಾವು ನನಗೆ ಅತೀವ ಸಂತಸ...

D K Shivakumar : ಎಸ್ ಎಮ್ ಕೃಷ್ಣ ಅವರ ಸಾವು ನನಗೆ ಅತೀವ ಸಂತಸ ತಂದಿದೆ – ವಿಧಾನಸೌಧದಲ್ಲಿ ಡಿಕೆ ಶಿವಕುಮಾರ್ ಶಾಕಿಂಗ್ ಸ್ಟೇಟ್ಮೆಂಟ್

Hindu neighbor gifts plot of land

Hindu neighbour gifts land to Muslim journalist

D K Shivakumar : ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಅಗಲಿಕೆ ಇಡೀ ನಾಡಿನ ಜನತೆಗೆ ದುಃಖವನ್ನು. ಇದೆಲ್ಲದರ ಮಧ್ಯೆ ಅತೀವ ದುಃಖ ಪಟ್ಟವರು ಕರ್ನಾಟಕದ ಉಪಮುಖ್ಯಮಂತ್ರಿಗಳು ಹಾಗೂ ಎಸ್ಎಂ ಕೃಷ್ಣ(S M Ksishna )ಅವರ ಬೀಗರು ಆದಂತಹ ಡಿಕೆ ಶಿವಕುಮಾರ್ ಅವರು. ಎಸ್ ಎಂ ಕೆ ಅವರು ಜೀವ ಬಿಟ್ಟ ನಂತರದಿಂದ ಹಿಡಿದು ಅವರ ಶವಯಾತ್ರೆ, ಅಂತಿಮ ವಿಧಿ ವಿಧಾನಗಳ ನಿರ್ವಹಿಸುವಿಕೆ, ಚಿತೆಗೆ ಅಗ್ನಿ ಸ್ಪರ್ಶ ಆಗುವ ತನಕ ಇದ್ದು ಎಲ್ಲವನ್ನು ಕಣ್ಣೀರು ಹಾಕುತ್ತಾ ಮುಂದಾಳತ್ವದಲ್ಲಿ ನಿರ್ವಹಿಸಿದವರು ಡಿಕೆ ಶಿವಕುಮಾರ್(D K Shivkumar) ಅವರು. ಆದರಿಗ ಡಿಕೆ ಶಿವಕುಮಾರ್ ಅವರು ಎಸ್ಎಂ ಕೃಷ್ಣ ಅವರ ಸಾವು ನನಗೆ ಅತೀವ ಸಂತೋಷವನ್ನು ತಂದಿದೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ಹೌದು, ಕೃಷ್ಣ ಅವರ ಸಾವು ನನಗೆ ದುಃಖ ತರಲಿಲ್ಲ, ಸಂತೋಷ ತಂದಿದೆ. ಅವರು ಅಷ್ಟು ಅರ್ಥಪೂರ್ಣವಾಗಿ ಬದುಕಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಭಾವುಕವಾಗಿ ನುಡಿದರು. ಇಂದು ವಿಧಾನಸಭೆಯಲ್ಲಿ ಮಾಜಿ ಸಿಎಂ ಎಸ್‌ಎಂ ಕೃಷ್ಣ ಸಾವಿಗೆ ಸಂತಾಪ ಸೂಚಿಸಿ ಡಿಕೆ ಶಿವಕುಮಾರ ಅವರು ಮಾತನಾಡಿದ್ದು. ಹಾಗಂತ ಅವರು ಇದು ಬೇಕೆಂದು ಮಾತನಾಡಿದ್ದಲ್ಲ. ಬಾಯಿ ತಪ್ಪಿನಿಂದಾಗಿ ಬಂದ ಮಾತು. ನಂತರ ಅವರು ಅದನ್ನು ಸರಿಪಡಿಸಿಕೊಂಡು ಮಾತನಾಡಿದ್ದಾರೆ.

ಅಲ್ಲದೆ ಬಳಿಕ ಪ್ರತಿಯೊಬ್ಬರೂ ಹುಟ್ಟಿದ ಮೇಲೆ ಒಂದಲ್ಲೊಂದು ದಿನ ಸಾಯಲೇಬೇಕು. ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಬೆಲೆ ಇಲ್ಲ. ಎಸ್‌ಎಂ ಕೃಷ್ಣ ಅವರು ನಮಗೆ ಆದರ್ಶ ಬಿಟ್ಟು ಹೋಗಿದ್ದಾರೆ. ಸಾರ್ವಜನಿಕವಾಗಿ ರಾಜಕಾರಣಿಯಾಗಿ ಹೇಗೆ ಆಡಳಿತ ನಡೆಸಬೇಕು ಎಂಬುದಕ್ಕೆ ಅವರು ಮಾದರಿಯಾಗಿದ್ದರು, ಮಾರ್ಗದರ್ಶಕರಾಗಿದ್ದರು ಎಂದರು.

ಅಲ್ಲದೆ ಎಸ್‌ಎಂ ಕೃಷ್ಣ ಅವರು ತೀರಿಕೊಳ್ಳುವ ಕ್ಷಣಕ್ಕೆ ನಾನು ಇರಲಿಲ್ಲ. ಅವರು 94 ವರ್ಷಗಳ ಕಾಲ ಅರ್ಥಪೂರ್ಣವಾಗಿ ಬದುಕಿದರು. ಅವರ ಭಾಷೆ ಶೈಲಿ, ಉಡುಗೆ ತೊಡುಗೆ, ಆಡಳಿತ ಎಲ್ಲವೂ ಶಿಸ್ತುಬದ್ಧವಾಗಿತ್ತು. ಎಸ್‌ಎಂ ಕೃಷ್ಣ ಅವರೊಂದಿಗೆ ಕೆಲವು ವಿಚಾರವಾಗಿ ಭಿನ್ನಾಭಿಪ್ರಾಯ ಇದ್ದಿದ್ದು ನಿಜ. ಅದೆಲ್ಲಕ್ಕೂ ಮೀರಿ ನನ್ನ ಅವರ ನಡುವಿನ ಸಂಬಂಧ ತಂದೆ-ಮಗನ ಸಂಬಂಧದಂತೆ ಇತ್ತು ಎಂದರು.