Bantwala: ಕಾರು-ಆಟೋ ರಿಕ್ಷಾ ನಡುವೆ ಅಪಘಾತ; ಮಹಿಳೆ ಸಾವು, ಮಕ್ಕಳ ಸಹಿತ 8 ಮಂದಿಗೆ ಗಾಯ

Bantwala: ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಕಾರು ಮತ್ತು ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಓರ್ವ ಮಹಿಳೆ ಸ್ಥಳದಲ್ಲಿಯೇ ಸಾವಿಗೀಡಾಗಿದ್ದು, ರಿಕ್ಷಾದಲ್ಲಿದ್ದ ಉಳಿದ ಮಕ್ಕಳು ಸಹಿತ ಎಂಟು ಮಂದಿಗೆ ಗಾಯವಾಗಿದ್ದು ಎಲ್ಲರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಕುರಿತು ವರದಿಯಾಗಿದೆ.

ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ ರಿಟ್ಸ್‌ ಕಾರು ಮತ್ತು ಆಪೆ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಪಂಜಿಕಲ್ಲು ಬಾಂದೊಟ್ಟು ರೆಚ್ಚಾಡಿ ಹರೀಶ್‌ ಎಂಬುವವರ ಪತ್ನಿ ತಿಲಕ (40) ಮೃತಪಟ್ಟಿದ್ದಾರೆ.

ಉಳಿದ ಹಾಗೆ ರಿಕ್ಷಾದಲ್ಲಿದ್ದ ಯಶಸ್ವಿನಿ, ಗೀತಾ, ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್‌, ದಿಶಾನಿ ಗಾಯಗೊಂಡಿದ್ದಾರೆ.

ಮದ್ವದಲ್ಲಿ ಸಂಬಂಧಿಕರ ಮನೆಯಲ್ಲಿ ನಡೆದ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ವಾಪಾಸು ಮನೆಗೆ ಬರುವ ಸಂದರ್ಭದಲ್ಲಿ ಬಾಂಬಿಲದಲ್ಲಿ ಅಪಘಾತ ನಡೆದಿದೆ. ಪಂಜಿಕಲ್ಲುವಿನಿಂದ ನಾರಾಯಣ ಪೂಜಾರಿ ಎಂಬುವವರ ರಿಕ್ಷಾವನ್ನು ಇವರು ಬಾಡಿಗೆ ಮಾಡಿದ್ದರು. ಸೀಮಂತ ಕಾರ್ಯಕ್ರಮ ಮುಗಿಸಿ ಇವರೆಲ್ಲ ಇದೇ ಗಾಡಿಯಲ್ಲಿ ಮನೆಗೆ ಬರುತ್ತಿದ್ದರು. ತಿಲಕ ಎಂಬುವವರು ಸ್ಥಳದಲ್ಲಿಯೇ ಮೃತ ಹೊಂದಿದ್ದಾರೆ.

Leave A Reply

Your email address will not be published.