Accident: mangaluru: ಕಾರು ಢಿಕ್ಕಿ: ಆಟೋ ರಿಕ್ಷಾ ಚಾಲಕನಿಗೆ ಗಾಯ!

Share the Article

Accident: ಇಂದ್ರಾಳಿ ರೈಲ್ವೇ ನಿಲ್ದಾಣದ ಆಟೋ ನಿಲ್ದಾಣದಲ್ಲಿ ಆಟೋ ರಿಕ್ಷಾ ಚಾಲಕರಾಗಿದ್ದ ಇಸ್ಮಾಯಿಲ್‌ (48) ಅವರು ನ. 24ರ ಮಧ್ಯರಾತ್ರಿ ಆಟೋ ರಿಕ್ಷಾವನ್ನು ಮಲ್ಪೆ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕೊಡವೂರು ಗ್ರಾಮದ ಕಲ್ಮಾಡಿ ಕೊರಗಜ್ಜ ದೈವಸ್ಥಾನದ ಬಳಿ ನಿರ್ಲಕ್ಷ್ಯತನದಿಂದ ಕಾರು ಚಲಾಯಿಸಿಕೊಂಡು ಬಂದು ಯಶ್ವಿ‌ತ್‌ ಎಂಬಾತ ಢಿಕ್ಕಿ (Accident) ಹೊಡೆದಿದ್ದ.

ಇದೀಗ ಅಪಘಾತದ ಪರಿಣಾಮ ಇಸ್ಮಾಯಿಲ್‌ ಅವರು ತೀವ್ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಸಹೋದರ ಅಬೂಬಕ್ಕರ್‌ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

Leave A Reply