Health Tips: ಮೂತ್ರದಲ್ಲಿ ನೊರೆ ಬರುತ್ತಾ? ಇದರ ಪರಿಣಾಮ ಹೀಗಿರುತ್ತೆ ನೋಡಿ!
Health Tips: ಮೂತ್ರ ಎನ್ನುವುದು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ದ್ರವದ ಮೂಲಕ ಹೊರಗೆ ಹಾಕುವುದು. ಮೂತ್ರವು ಯೂರಿಯಾ, ನೀರು, ಉಪ್ಪಿನ ಮಿಶ್ರಣವಾಗಿದೆ. ಮುಖ್ಯವಾಗಿ ನಮ್ಮ ದೇಹದಲ್ಲಿರುವ ಇತರ ಅಂಗಗಳಂತೆ ಮೂತ್ರಪಿಂಡವೂ ದೇಹಕ್ಕೆ ಬಹಳ ಮುಖ್ಯವಾದ ಒಂದು ಅಂಗವಾಗಿದೆ. ಆದರೆ ನೀವು ನಿಮ್ಮ ಮೂತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಆರೋಗ್ಯದ ಸ್ಥಿತಿಯನ್ನು ತಿಳಿಯಬಹುದು.
ಸಾಮಾನ್ಯವಾಗಿ ಮೂತ್ರವು ಬಿಳಿ ಬಣ್ಣದಾಗಿದ್ದರೆ, ಆಗ ಆರೋಗ್ಯವು ಸರಿಯಾಗಿದೆ ಎಂದು ಹೇಳಬಹುದು. ಇನ್ನು ಕೆಲವೊಮ್ಮೆ ಇದು ಹಳದಿ ಅಥವಾ ಸ್ವಲ್ಪ ಕಂದು ಬಣ್ಣ ಕೂಡ ತಿರುಗುವುದು. ಆದರೆ ಕೆಲವರಲ್ಲಿ ಮೂತ್ರವು ತುಂಬಾ ನೊರೆಯನ್ನು ಉಂಟು ಮಾಡುತ್ತೆ, ಆಗ ತಕ್ಷಣವೇ ವೈದ್ಯರ ಸಲಹೆ (Health Tips) ಕೇಳಿ ಚಿಕಿತ್ಸೆ ಪಡೆಯುವುದು ಅಗತ್ಯ. ಹೌದು, ನೊರೆಯು ಅತಿಯಾಗಿದ್ದರೆ, ಪದೇ ಪದೇ ಮೂತ್ರದಲ್ಲಿ ನೊರೆ ಕಾಣಿಸಿಕೊಂಡರೆ ಆಗ ಇದು ಏನಾದರೂ ಆನಾರೋಗ್ಯದ ಸೂಚನೆಯಾಗಿದೆ ಎಂದು ಹೈದಾರಾಬಾದ್ ನ ಏಶ್ಯನ್ ಇನ್ ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ ಆಸ್ಪತ್ರೆಯ ಮಹಿಳಾ ಯುರೋಲಾಜಿಸ್ಟ್ ಡಾ. ದೀಪ್ರಿ ಸುರೇಖಾ ಅವರು ಸಲಹೆ ನೀಡುತ್ತಾರೆ.
ನೊರೆಯುಕ್ತ ಮೂತ್ರಕ್ಕೆ ಕಾರಣಗಳೇನು?
ಅಂದರೆ, ಗಾಳಿಯ ಜತೆಗೆ ಮೂತ್ರವು ಮಿಶ್ರಣಗೊಂಡ ವೇಳೆ ಗುಳ್ಳೆಗಳು ಅಥವಾ ನೊರೆಯು ಉಂಟಾಗಬಹುದು. ಮೂತ್ರವು ತುಂಬಾ ವೇಗವಾಗಿದ್ದರೆ ಆಗ ಹೀಗೆ ಆಗಬಹುದು ಅಥವಾ ಮೂತ್ರದಲ್ಲಿನ ಕೆಲವು ಅಂಶಗಳಿಂದಲೂ ಇದು ಸಾಧ್ಯವಿದೆ. ಆದರೆ ನಿಯಮಿತವಾಗಿ ಮೂತ್ರದಲ್ಲಿ ನೊರೆಯು ನಿರ್ಮಾಣ ವಾಗುತ್ತಲಿದ್ದರೆ, ಆಗ ಬೇರೆ ಆರೋಗ್ಯ ಸಮಸ್ಯೆಗಳು ಆಗಿರುತ್ತೆ.
ಮುಖ್ಯವಾಗಿ ಕಿಡ್ನಿಯು ಸರಿಯಾಗಿ ಕೆಲಸ ಮಾಡದೆ ಇರುವ ಲಕ್ಷಣವು ಇದಾಗಿರಬಹುದು ಎಂದು ಹೈದಾರಾಬಾದ್ ನ ಏಶ್ಯನ್ ಇನ್ ಸ್ಟಿಟ್ಯೂಟ್ ಆಫ್ ನೆಫ್ರಾಲಜಿ ಮತ್ತು ಯುರಾಲಜಿ ಆಸ್ಪತ್ರೆಯ ಮಹಿಳಾ ಯುರೋಲಾಜಿಸ್ಟ್ ಡಾ. ದೀಪ್ರಿ ಸುರೇಖಾ ಅವರು ಹೇಳಿದ್ದಾರೆ.
ಕೆಲವೊಮ್ಮೆ ಮೂತ್ರದಲ್ಲಿ ಪ್ರೋಟೀನ್ ಅಂಶವು ಸೇರಿಕೊಂಡಿರುವುದು. ಇದನ್ನು ಪ್ರೋಟೀನೂರಿಯಾ ಎಂದು ಕರೆಯುವರು. ಕಿಡ್ನಿಯು ರಕ್ತವನ್ನು ಸರಿಯಾಗಿ ಶುದ್ಧೀಕರಿಸದೆ ಇದ್ದ ಸಂದರ್ಭದಲ್ಲಿ ಹೀಗೆ ಆಗುವುದು. ಇದ ರಿಂದ ಪ್ರೋಟೀನ್ ಮೂತ್ರದಲ್ಲಿ ಸೇರಿಕೊಂಡು ನೊರೆ ಉಂಟು ಮಾಡು ವುದು. ಇದು ಕಿಡ್ನಿ ಸಮಸ್ಯೆಯ ಆರಂಭಿಕ ಲಕ್ಷಣಗಳು ಕೂಡಾ ಆಗಿದೆ.
ನಿರ್ಜಲೀಕರಣಗೊಂಡ ವೇಳೆ ದೇದಹಲ್ಲಿ ಮೂತ್ರವು ಹೆಚ್ಚು ಸಾಂದ್ರ ಗೊಳ್ಳುವುದು. ಇದರಿಂದಾಗಿ ಅದು ನೊರೆಯಂತೆ ಕಾಣಿಸುವುದು. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿದರೆ ಆಗ ನೊರೆಯು ಕಡಿಮೆ ಆಗುವುದು.
ಸಾಮಾನ್ಯವಾಗಿ ಮೂತ್ರನಾಳದ ಸೋಂಕು ಎಲ್ಲರಲ್ಲಿಯೂ ಕೂಡ ಕಂಡುಬರುತ್ತದೆ, ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಈ ಸಮಸ್ಯೆ ತುಂಬಾ ಹೆಚ್ಚು ಎಂದು ವೈದ್ಯರು ಕೂಡ ಹೇಳುತ್ತಾರೆ. ಈ ಸಮಸ್ಯೆಗೆ ಪ್ರಮುಖದ ಕಾರಣವೇನೆಂದರೆ, ಮೂತ್ರನಾಳದ ವ್ಯವಸ್ಥೆಯ ಭಾಗದಲ್ಲಿ ಸೋಂಕುಗಳು ಕಾಣಿಸಿಕೊಳ್ಳುವುದು!
ಈ ಕಾಯಿಲೆಯ ಪ್ರಮುಖ ಲಕ್ಷಣಗಳು ಯಾವುದು ಎಂದರೆ, ನೊರೆ ನೊರೆಯಿಂದ ಕೂಡಿದ ಮೂತ್ರ, ಮೂತ್ರ ವಿಸರ್ಜನೆ ಮಾಡುವಾಗ ಉರಿ ಕಾಣಿಸಿ ಕೊಳ್ಳುವುದು, ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಮತ್ತು ಮೂತ್ರದಲ್ಲಿ ರಕ್ತ ಕಂಡುಬರುವುದು ಇರುತ್ತದೆ. ಇನ್ನು ಕೆಲವೊಂದು ಸಂದರ್ಭದಲ್ಲಿ ಮೂತ್ರಕೋಶದಲ್ಲಿನ ಸೋಂಕು ಮೂತ್ರದಲ್ಲಿ ಬದಲಾವಣೆ ಉಂಟು ಮಾಡಬಹುದು. ಇದರ ಜತೆಗೆ ಉರಿಯೂತ, ಪದೇ ಪದೇ ಮೂತ್ರ ವಿಸರ್ಜನೆ ಅಥವಾ ಹೊಟ್ಟೆಯ ಕೆಳಗಿನ ಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು.
ತಜ್ಞರು ಹೇಳುವ ಪ್ರಕಾರ, ರಕ್ತದಲ್ಲಿ ಶುಗರ್ ಲೆವೆಲ್ ಜಾಸ್ತಿಯಾಗಿ ಬಿಟ್ಟರೆ, ಅದರಿಂದ ಕಿಡ್ನಿಗಳ ಮೇಲೆ ಕೆಟ್ಟ ಪ್ರಭಾವ ಬೀರಿ ನೊರೆ ತುಂಬಿದ ಮೂತ್ರ ಅಥವಾ ಪ್ರೋಟೀನ್ ಅಂಶ ಸೇರಿರುವ ಮೂತ್ರ ಬಿಡುಗಡೆಯಾಗುವಂತೆ ಮಾಡುತ್ತದೆ.
ಅಥವಾ ಕಿಡ್ನಿಗೆ ಹಾನಿ ಉಂಟು ಮಾಡುವಂತಹ ಕೆಲವು ಔಷಧಿಗಳನ್ನು ಸೇವನೆ ಮಾಡಿದರೆ ಆಗ ಇದರಿಂದ ಮೂತ್ರದಲ್ಲಿ ನೊರೆಯು ಕಾಣಿಸಬಹುದು.
ಒಂದು ವೇಳೆ ಮೂತ್ರದಲ್ಲಿ ಯಾವಾಗ ಪ್ರೋಟೀನ್ ಅಂಶ ಸೇರಿಕೊಂಡಾಗ, ಅದು ಕಿಡ್ನಿಯಲ್ಲಿ ಕಲ್ಲುಗಳ ರೂಪ ಪಡೆದುಕೊಳ್ಳುತ್ತವೆ. ಇದನ್ನೇ ಕಿಡ್ನಿ ಸ್ಟೋನ್ ಎನ್ನುತ್ತಾರೆ. ಒಂದು ವೇಳೆ ಈ ಸಮಸ್ಯೆಗೆ ಸರಿಯಾದ ಚಿಕಿತ್ಸೆ ಪಡೆದುಕೊಳ್ಳದಿದ್ದರೆ, ಅದು ಕ್ರಮೇಣವಾಗಿ ಉರಿಯುತ ಕಂಡುಬರುವಂತೆ ಮಾಡುತ್ತದೆ ಮತ್ತು ಕಿಡ್ನಿಗಳ ಅಂಗಾಂಶಗಳ ಮೇಲೆ ಪ್ರಭಾವ ಬೀರುತ್ತದೆ. ಕೊನೆಗೆ ಇದರಿಂದ ಕೂಡ ಮೂತ್ರದಲ್ಲಿ ನೊರೆ ಕಾಣಿಸಿಕೊಳ್ಳಲು ಕಾರಣವಾಗಿ ಬಿಡುತ್ತದೆ.
ಯಾವಾಗಲೊಮ್ಮೆ ಹೀಗೆ ಆದರೆ, ಅದರಿಂದ ಯಾವುದೇ ಸಮಸ್ಯೆಯಾದರು. ಆದರೆ ನಿರಂತರವಾಗಿ ಮೂತ್ರದಲ್ಲಿ ನೊರೆ ಕಾಣಿಸಿಕೊಳ್ಳುತ್ತಿದ್ದರೆ, ಅದರ ಜತೆಗೆ ಊತ, ನಿಶ್ಯಕ್ತಿ ಅಥವಾ ಮೂತ್ರದಲ್ಲಿ ಬದಲಾವಣೆ ಕಂಡಬಂದರೆ ಆಗ ತಪಾಸಣೆ ಮಾಡಿಸಬೇಕು.
ಈ ಸಮಸ್ಯೆಗೆ ಪರಿಹಾರಗಳು ಏನು: ಇದಕ್ಕಾಗಿ ಸಮತೋಲಿತ ಜೀವನಕ್ರಮದೊಂದಿಗೆ ಕಿಡ್ನಿಗಳನ್ನು ಆರೋಗ್ಯವಾಗಿಡುವುದು ಅತೀ ಮುಖ್ಯ. ಹಾಗೂ ಹೆಚ್ಚು ನೀರು ಸೇವಿಸಿ, ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಬೇಕು.
w2iuuy