Uttar Pradesh: ದೇವಾಲಯದಲ್ಲೇ ಹಿಂದೂ ಯುವತಿಯೊಂದಿಗೆ ಅನ್ಯಕೋಮಿನ ಯುವಕನ ಚಕ್ಕಂದ – ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಜೋಡಿ, ವಿಡಿಯೋ ವೈರಲ್

Share the Article

Uttar Pradesh: ದೇವಾಲಯದೊಳಗೇ ಅನ್ಯ ಕೋಮಿನ ಯುವಕನೋರ್ವ ಹಿಂದೂ ಯುವತಿಯ ಜತೆ ಚಕ್ಕಂದ ಆಡುತ್ತಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಉತ್ತರ ಪ್ರದೇಶದ(Uttar Pradesh)ಹರ್ದೋಯ್‍ನ ಪಾಲಿ ನಗರದ ದೇವಾಲಯವೊಂದರಲ್ಲಿ ಹಿಂದೂ ಭಕ್ತರು, ದೇವಾಲಯದ ಆವರಣದೊಳಗೆ ಅನ್ಯಕೋಮಿನ ಯುವಕ ಮತ್ತು ಹಿಂದೂ ಯುವತಿ ಅಶ್ಲೀಲತೆಯಲ್ಲಿ ತೊಡಗಿಕೊಂಡಿದ್ದಾರೆ. ಇದನ್ನು ಕಂಡು ಸ್ಥಳೀಯರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸ್ ವಿಚಾರಣೆಯ ಸಮಯದಲ್ಲಿ, ಆ ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದವನಾಗಿದ್ದು, ಆತನ ಹೆಸರು ಶಾದಾಬ್ ಎಂಬುದಾಗಿ ತಿಳಿದುಬಂದಿದೆ.

ದೇವಾಲಯದಲ್ಲಿ ಅಳವಡಿಸಲಾದ ಸಿಸಿಟಿವಿ(CCTV) ಕ್ಯಾಮೆರಾಗಳಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈ ವಿಡಿಯೊದಲ್ಲಿ ಯುವತಿ ಮತ್ತು ಯುವಕ ದೇವಾಲಯದ ಆವರಣದೊಳಗೆ ಗೋಡೆಯ ಹಿಂದೆ ಹೋಗಿದ್ದಾರೆ. ದೇವಸ್ಥಾನದಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯೊಂದಿಗೆ ಇರುವುದನ್ನು ಗಮನಿಸಿದ ಭಕ್ತರಲ್ಲಿ ಅನುಮಾನ ಬಂದಿದೆ. ಅವರಿಬ್ಬರು ದೇವಸ್ಥಾನದ ಗೋಡೆಯ ಹಿಂದೆ ಅಶ್ಲೀಲತೆಯಲ್ಲಿ ತೊಡಗಿಕೊಳ್ಳುವುದನ್ನು ಕಂಡು ಅವರನ್ನು ಸ್ಥಳದಲ್ಲೇ ಹಿಡಿದು ನಂತರ, ಪಾಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

Leave A Reply